ಅಮೃತಾ ಎಂಜಿನಿಯರಿಂಗ್ ಕಾಲೇಜು ಖರೀದಿ ಅವ್ಯೆವಹಾರ ಆರೋಪ- ಕೇಂದ್ರ ಸಚಿವ ಅನಂತಕುಮಾರ್​ಗೆ ಸಂಕಷ್ಟ?!

ಅಮೃತಾ ಎಂಜಿನಿಯರಿಂಗ್ ಕಾಲೇಜು ಖರೀದಿ ವೇಳೆ ನಡೆದಿದೇ ಎನ್ನಲಾದ ಅವ್ಯವೆಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್. ಎನ್. ಅನಂತಕುಮಾರ, ಪತ್ನಿ ತೇಜಸ್ವಿನಿ ಅನಂತಕುಮಾರ ಮತ್ತು ಬಾಗಲಕೋಟೆ ಬಸವೇಶ್ವರ ವಿಧ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠಗೆ ಸಂಕಷ್ಟ ಎದುರಾಗಿದೆ.

ad


ತೇಜಸ್ವಿನಿ ಅನಂತಕುಮಾರ ನಿರ್ದೇಶಕಿಯಾಗಿದ್ದ ಅಮೃತಾ ಎಂಜಿನಿಯರಿಂಗ್ ಕಾಲೇಜು ಖರೀದಿದೆ ಎನ್ನಲಾದ ಅವ್ಯವಹಾರದ ಕೇಸ್ ವಿಚಾರದಲ್ಲಿ ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಬಾಗಲಕೋಟೆ ಜಿಲ್ಲಾ ಪ್ರಧಾನ ದಿವಾಣಿ ನ್ಯಾಯಾಲಯ ವಜಾಗೊಳಿಸಿದೆ.
ಮಲ್ಲಣ್ಣ ಜಿಗಳೂರು ಎಂಬುವರು ಈ ಬಗ್ಗೆ ಬಾಗಲಕೋಟೆ ಕೋರ್ಟ್​ನಲ್ಲಿ ಕೇಸ್ ದಾಖಲಿಸಿದ್ದರು. ಕೇಸನ್ನು ತನಿಖೆ ನಡೆಸಲು ಕೋರ್ಟ್ ಬಾಗಲಕೋಟೆ ನಗರ ಠಾಣೆ ಪೊಲೀಸರಿಗೆ ಆದೇಶಿಸಿತ್ತು.ತನಿಖೆ ನಡೆಸಿದ ಪೊಲೀಸರು 2014ರಲ್ಲಿಯೂ ಈ ಕೇಸ್ ಗಾಗಿ ಬಿ ರಿಪೋರ್ಟ ಸಲ್ಲಿಸಿದ್ದರು, ಆಗಲೂ ಕೋರ್ಟ್​ ವಜಾಗೊಳಿಸಿತ್ತು. ನಂತರ ತನಿಖೆ ನಡೆಸಿದ ಪೊಲೀಸರು ಈಗ ಪುನಃ ಬಿ ರಿಪೋರ್ಟ್ ಸಲ್ಲಿಸಿದ್ದರು.

ಶನಿವಾರ ನಡೆದ ವಿಚಾರಣೆಯಲ್ಲಿ ಬಾಗಲಕೋಟೆ ಡಿವೈ ಎಸ್ ಪಿ ಸಲ್ಲಿಸಿದ್ದ ಬಿ ರಿಪೋರ್ಟನ್ನು ಜಿಲ್ಲಾ ಪ್ರಧಾನ ದಿವಾಣಿ ನ್ಯಾಯಾಲಯ ವಜಾಗೊಳಿಸಿದೆ. ಬೆಂಗಳೂರಿನ ಬಿಡದಿ ಬಳಿ ಇರುವ ಅಮೃತಾ ಎಂಜಿನಿಯರಿಂಗ್ ಕಾಲೇಜ್ ಗೆ ಕೇಂದ್ರ ಸಚಿವ ಹೆಚ್ ಎನ್ ಅನಂತಕುಮಾರ ಪತ್ನಿ ತೇಜಸ್ವಿನಿ ಅನಂತಕುಮಾರ ನಿರ್ದೇಶಕಿಯಾಗಿದ್ದರು. ಕಾಲೇಜಿಗೆ ವಿಧ್ಯಾರ್ಥಿಗಳು ದಾಖಲಾಗುತ್ತಿಲ್ಲ ಎಂದು ಕಾಲೇಜನ್ನು ಮಾರಾಟ ಮಾಡಲು ಮುಂದಾದ ಪ್ರಕರಣ ಇದು.ಆದರೆ ಈ ಕಾಲೇಜಿನ ಮೌಲ್ಯ 26 ಕೋಟಿ ಇದ್ದು,ಕಾಲೇಜು ಖರೀದಿಗಾಗಿ ವೀರಣ್ಣ ಚರಂತಿಮಠ ಬಾಗಲಕೋಟೆ ಬಸವೇಶ್ವರ ವಿಧ್ಯಾವರ್ಧಕ ಸಂಘದ ಮತ್ತೊಂದು ಆಸ್ತಿಯನ್ನು ಒತ್ತೆ ಇಟ್ಟು 50 ಕೋಟಿ ಸಾಲ ಪಡೆದಿದ್ದರು.ಸಾಲ ಪಡೆದ 50 ಕೋಟಿ ಹಣದಲ್ಲಿ 24 ಕೋಟಿ ಹಣ ದುರ್ಬಳಕೆ ಆಗಿದೆ. ಕಡಿಮೆ ಮೌಲ್ಯದ ಕಾಲೇಜು ಖರೀದಿಯಲ್ಲಿ ಹೆಚ್ಚು ಹಣ ವ್ಯವಹಾರವಾಗಿದೆ ಎಂದು ಮಲ್ಲಣ್ಣ ಜಿಗಳೂರು ಕೇಸ್ ದಾಖಲಿಸಿದ್ದರು. ಮಲ್ಲಣ್ಣ ಜಿಗಳೂರ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು.ಸದ್ಯ ನ್ಯಾಯಾಲಯ ಬಿ ರಿಪೋರ್ಟ್​ ವಜಾಗೊಳಿಸಿದೆ..