ರೌಡಿ ಪರೇಡ್​ ವೇಳೆ ಸೈಲೆಂಟ್​ ಸುನೀಲ್ ಬೆವರಿಳಿಸಿದ ಅಲೋಕ್​​ಕುಮಾರ್​! ಬಾಲ ಬಿಚ್ಚಿದ್ರೆ ಹುಶಾರ್​​ ಎಂದ ವಿಡಿಯೋ ವೈರಲ್​​!!

ಅಲ್ಲಿ ಬೆಂಗಳೂರಿನ ರೌಡಿ ಪರೇಡ್​ ನಡೀತಿತ್ತು. ಈ ವೇಳೆ ಸುಮ್ಮನಿರಲಾದ ರೌಡಿಯೊಬ್ಬ ಪೊಲೀಸ್ ಅಧಿಕಾರಿಯನ್ನೇ ಗುರಾಯಿಸ್ತಿದ್ದ. ಇದನ್ನು ಕಂಡ ಆ ಖಡಕ್​ ಪೊಲೀಸ್​ ಆಫೀಸರ್​ ಅಕ್ಷರಷಃ ಕೆರಳಿ ಕೆಂಡವಾಗಿ ಬಿಟ್ರು. ಅಷ್ಟೇ ಅಲ್ಲ, ಏನು ನನ್ನನ್ನೆ ಗುರಾಯಿಸ್ತೀಯಾ? ಏನಂದುಕೊಂಡಿದ್ದೀಯಾ? ಬಾಲ್​ ಕಟ್​ ಮಾಡಿ ಲಾಕಪ್​ ಹಾಕಿಸಿ ಬಿಡ್ತಿನಿ ಹುಶಾರ್ ಅಂತ ಖಡಕ್​ ವಾರ್ನಿಂಗ್​ ಕೊಟ್ರು. ಇಂತಹದೊಂದು ಖಡಕ್​ ಸೀನು ನಡೆದಿದ್ದು, ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ. ಕುಖ್ಯಾತ ರೌಡಿ ಸೈಲೆಂಟ್​ ಸುನೀಲ್​​ ಲುಕ್​​ಗೆ  ಸಿಸಿಬಿ ಹೆಚ್ಚುವರಿ ಪೊಲೀಸ್​​​ ಆಯುಕ್ತ ಅಲೋಕ್​ ಕುಮಾರ್​ ನೀರಿಳಿಸಿದ ದೃಶ್ಯ ಈಗ ಎಲ್ಲೆಡೆ ವೈರಲ್​ ಆಗಿದ್ದು, ಜನರು ಅಲೋಕ್​ ಕುಮಾರ ಶ್ಲಾಘಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆ ಬೆಂಗಳೂರಿನ‌ ಸಿಸಿಬಿ ಪೊಲೀಸ್ರು ಇವತ್ತು ರೌಡಿ ಪರೇಡ್ ನಡೆಸಿದ್ರು. ಲೋಕ ಸಭಾ ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಬಾರದು ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಇಂತಹದೆ ಪಕ್ಷಕ್ಕೆ ಮತ ಹಾಕಿ ಅಂತಾ ಯಾರ ಮೇಲೂ ಒತ್ತಡ ಹೇರಬಾರದು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು. ರೌಡಿ ಪರೇಡ್ ನಲ್ಲಿ‌ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ರೌಡಿಶೀಟರ್ ಗಳು ಭಾಗಿಯಾಗಿದ್ರು. ಇವರಿಗೆಲ್ಲ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಡಿಸಿಪಿ ಗಿರೀಶ್ ಖಡಕ್ ವಾರ್ನಿಂಗ್ ನೀಡಿದ್ರು..

ರೌಡಿ ಪರೇಡ್ ನಲ್ಲಿ ಸೈಲೆಂಟ್ ಸುನೀಲ ಶಿವಾಜಿನಗರ ತನ್ವೀರ್ ಕುಣಿಗಲ್ ಗಿರಿ ಮಾರೇನಹಳ್ಳಿ ಜಗ್ಗ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಕುಖ್ಯಾತ ರೌಡಿಗಳು ಭಾಗಿಯಾಗಿದ್ರು. ಈ ವೇಳೆ ಒಬ್ಬೊಬ್ಬರಿಗೆ ವಾರ್ನಿಂಗ್ ಮಾಡುತ್ತ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೈಲೆಂಟ್‌ಸುನೀಲನ ಬಳಿ ಬಂದ್ರು. ಈ ವೇಳೆ ಅಲೋಕ್ ಕುಮಾರ್ ಸುನೀಲನ ಇತ್ತಿಚಿನ ಆ್ಯಕ್ಟಿವಿಟಿಗಳ ಬಗ್ಗೆ ವಿಚಾರಿಸ್ತಾ ಇದ್ರೆ ಸೈಲೆಂಟ್‌ ಸೈಲೆಂಟ್ ಸುನೀಲ್ ಇದಾವುದಕ್ಕೂ ಕ್ಯಾರೆ ಎನ್ನದವನಂತೆ ಅಲೋಕ್ ಕುಮಾರ್ ರನ್ನೆ ಗುರಾಯಿಸ್ತಾ ಇದ್ದ. ಇದ್ರಿಂದ ಕೆಂಡಾಮಂಡಲವಾದ ಅಲೋಕ್ ಕುಮಾರ್ ಪೊಲೀಸ್ರಿಗೆ ಗುರಾಯಿಸುವ ನೀನು ಸಾರ್ವಜನಿಕರಿಗೆ ಏನ್ ಮಾಡ್ತೀಯಾ ನಿನ್ನೆ ಆ್ಯಕ್ಟಿವಿಟಿಗಳೇನು‌ ಅಂತಾ ಖಡಕ್ ಆಗಿ ತರಾಟೆಗೆ ತೆಗೆದುಕೊಂಡ್ರು. ಅಲ್ಲದೆ ಇವನ ಇತ್ತಿಚಿನ ಚಟುವಟಿಕೆಗಳನ್ನ ಸಂಗ್ರಹಿಸಿ ಏನಾದ್ರು ಬಾಲ ಬಿಚ್ಚಿರುವುದು ಗೊತ್ತಾದ್ರೆ ಒಳಗೆ ಹಾಕಿ‌ಅಂತಾ ಅಧಿಕಾರಿಗಳಿಗೆ ಖಡಕ್ ಅದೇಶ ನೀಡಿದ್ರು.

ಇದೇ ವೇಳೆ ಅಲೋಕ್ ಆಗಮನಕ್ಕೂ ಮೊದಲು‌ ಕುಣಿಗಲ್ ಗಿರಿಗೆ ಡಿಸಿಪಿ ಗಿರೀಶ್ ಕೂಡ ಖಡಕ್ ವಾರ್ನ್ ಮಾಡಿದ್ರು. ಏನ್ ಮಾಡ್ತಾ ಇದ್ದೀಯಾ ಅಂದ್ರೆ ಗಿರಿ ಮದುವೆ ಆಗಬೇಕು ಅಂದ. ಇದಕ್ಕೆ ಗಿರೀಶ್ ತುಂಬಾ ಬಾಲ ಬಿಚ್ತಾ ಇದ್ದೀಯಾ ಬೇಗ ಹೊರಟೋಗ್ತೀಯಾ ಮದುವೆ ಆಗ್ಬೇಡ ಅಂತಾ ಎಚ್ಚರಿಸಿದ್ರು.