ಕರ್ನಾಟಕದಲ್ಲಿ ಕಮಲ ಅರಳಿಸಲು ಶಾ ಮಾಸ್ಟರ್​ ಪ್ಲ್ಯಾನ್​- ಕರಾವಳಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ನಮೋ!

ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಇತ್ತ ಕಾಂಗ್ರೆಸ್​ , ಯುವರಾಜ್ ರಾಹುಲ್ ಗಾಂಧಿಯನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂಧಾಗುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೆ, ದಕ್ಷಿಣ ಭಾರತದಲ್ಲಿ ದಂಡಯಾತ್ರೆಗೆ ಪ್ರಧಾನಿ ಮೋದಿ ಪ್ಲಾನ್​​​ ಮಾಡಿದ್ದಾರೆ ಅನ್ನೋ ಎಕ್ಸಕ್ಲೂಸಿವ್ ಮಾಹಿತಿ ಲಭ್ಯವಾಗುತ್ತಿದೆ.

ad

ಕರ್ನಾಟಕದ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಿಂದ ಪ್ರಧಾನಿ ಮೋದಿ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿಬರತೊಡಗಿದೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಮಂಗಳೂರಿಗೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಕಾಲಿಟ್ಟಿದ್ದು, ಜೊತೆಗೆ ಮೋದಿ ಕಮಾಂಡೋಸ್ ಕೂಡ ಬಂದಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯಿಂದ ಕರಾವಳಿಯಲ್ಲಿ ಜನರ ನಾಡಿಮಿಡಿತ ಅರಿಯುವ ಕೆಲಸ ಕೂಡ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆಯಿಂದ ಬಿಜೆಪಿಗೆ 2009ರ ಲೋಕಸಭೆ ಎಲೆಕ್ಷನ್​​ನಲ್ಲಿ ಭರ್ಜರಿ ಲಾಭವೇ ಆಗಿತ್ತು. ಯುಪಿ ಸುತ್ತಮುತ್ತ ಎಂಟು ರಾಜ್ಯಗಳಲ್ಲಿ ಸುಮಾರು 200 ಕ್ಷೇತ್ರಗಳು ಬಿಜೆಪಿ ಬುಟ್ಟಿಗೆ ಬಿದ್ದಿದ್ದವು. ಇದೇ ಲೆಕ್ಕಾಚಾರ ಈಗ ದಕ್ಷಿಣ ಭಾರತದ ಮೇಲೆ ಶುರುವಾಗಿದೆ. ಅದಕ್ಕೆ ಕರ್ನಾಟಕವನ್ನೇ ಮೋದಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮೋದಿ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದರಿಂದ ಯುಪಿಯ 80 ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.ಹೀಗಾಗಿ ಈ ಭಾರಿ ಕರ್ನಾಟಕವನ್ನು ಈ ರಣತಂತ್ರಕ್ಕೆ ಆಯ್ದುಕೊಳ್ಳಲಾಗಿದ್ದು, ವಿಧಾನಸಭೆಯಲ್ಲಿ ಬಿಜೆಪಿ ಪರ ವ್ಯಕ್ತವಾಗಿದ್ದ ಜನರ ಒಲವನ್ನು ಲೋಕಸಭೆಯಲ್ಲೂ ಉಳಿಸಿಕೊಳ್ಳುವುದು ಕಮಲಯ ಪಾಳಯದ ಪ್ಲ್ಯಾನ್. ಈ ಪ್ಲ್ಯಾನ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಕಾದುನೋಡಬೇಕಿದೆ.