ಫಿಟ್​​ನೆಸ್​​​​​​ನತ್ತ ಮುಖಮಾಡಿ ವರ್ಕೌಟ್​​ ಆರಂಭಿಸಿದ ಅಮೂಲ್​ ಬೇಬಿ! ಸಧ್ಯದಲ್ಲೇ ಸ್ಯಾಂಡಲವುಡ್​​​ಗೆ ಗೋಲ್ಡನ್​ ಕ್ವೀನ್​ ಅಮೂಲ್ಯ ಕಮ್​ ಬ್ಯಾಕ್​!!

ಅಮೂಲ್ಯ…… ಹೆಸರಿಗೆ ತಕ್ಕಂತೆ ಕನ್ನಡ ಸಿನಿ ದುನಿಯಾದ ಅಮೂಲ್ಯವಾದ ನಾಯಕಿ ನಟಿ. ಸೌಂದರ್ಯ – ನಟನೆಯ ಮೂಲಕ ಕನ್ನಡ ಸಿನಿ ರಸಿಕರ ಮನಗೆದ್ದ ತಾರೆ. ಬಬ್ಲಿ ಬಬ್ಲಿ ಪಾತ್ರಗಳ ಜೊತೆ ಕೆಲ ವಿಭಿನ್ನ ಗೆಟಪ್​ನಲ್ಲಿ ಸಹ ಕಾಣಿಸಿಕೊಂಡು ಸೈ ಅನ್ನಿಸಿಕೊಂಡಿದ್ದ ಪ್ರತಿಭಾನ್ವಿತ ನಟಿ.

ad

ಅದರಲ್ಲೂ ಚೆಲುವಿನ ಚಿತ್ತಾರದ ಐಸೂ ಎಂದರೆ ಸಾಕು. ನವ ಯುವಕರ ಕಿವಿ ನೆಟ್ಟಗಾಗುತ್ತದೆ. ಅಷ್ಟರಮಟ್ಟಿಗೆ ಆ ಸಿನಿಮಾ, ಐಸೂ, ಮಾದೇಶನ ಕಾಂಬಿನೇಷನ್ನು ಕನ್ನಡಿಗರ ಹೃದಯ ಮುಟ್ಟಿದೆ. ತೀರ ಚಿಕ್ಕ ವಯಸ್ಸಿನಲ್ಲಿಯೇ ಹಿರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಸೂ ಉರುಫ್ ಅಮೂಲ್ಯ ಬಹುತೇಕ ಹಿಟ್ ಸಿನಿಮಾಗಳ ಹೀರೋಯಿನ್​​​.

 

ವಿಶೇಷ ಅಂದ್ರೆ ಇಂಡಸ್ಟ್ರಿಯಲ್ಲಿ ಬೇಡಿಕೆ ಇರುವಾಗಲೇ ಬ್ರೇಕ್ ಕೊಟ್ಟ ಅಮೂಲ್ಯ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಅಲ್ಲಿಂದ ಅಮ್ಮು ಇಂಡಸ್ಟ್ರಿಗೆ ಕಮ್ ಬ್ಯಾಕ್ ಆಗ್ತಾರೆ ಅನ್ನೋ ಸುದ್ದಿ ಓಡಾಡ್ತಾನೇ ಇತ್ತು. ಅಮೂಲ್ಯ ಕೂಡ ಇದು ನಿಜ – ಸುಳ್ಳು ಅಂತ ಯಾವುದನ್ನೂ ಹೇಳಿರ್ಲಿಲ್ಲ.

 

ಗೋಲ್ಡನ್ ಗರ್ಲ್ ಅಮೂಲ್ಯ ಹಸೆಮಣೆ ಏರಿದ ದಿನದಿಂದ ಅವ್ರ ಅಭಿಮಾನಿಗಳು ಒಂದು ಪ್ರಶ್ನೆಯಂತು ದಿನ ನಿತ್ಯ ಕೇಳ್ತನೆ ಇದ್ರು. ಅದೇನಂದ್ರೆ ಅಮೂಲ್ಯ ನಟಿಸೋದನ್ನು ಮುಂದುವರಿಸ್ತಾರೋ ಅಥವಾ ಚಿತ್ರರಂಗಕ್ಕೆ ವಿದಾಯ ಹೇಳ್ತಾರೋ ? ಅನ್ನೋದು. ಈ ಒಂದು ಮಿಲಿಯನ್ ಡಾಲರ್ ಪ್ರಶ್ನೆಗೆ ಅಮ್ಮು ಎಂದೂ ನೇರವಾಗಿ ,ಸ್ಪಷ್ಟವಾಗಿ ಉತ್ತರಿಸಿಲ್ಲ..

 

ಹಾಗೆ ನೋಡಿದ್ರೆ ಅಮೂಲ್ಯ ನಾನು ಮದುವೆಯಾದ ನಂತ್ರ ಬಣ್ಣದ ಜಗತ್ತಿಗೆ ವಿದಾಯ ಹೇಳಿ ಸಂಸಾರದಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ತೇನೆ ಎಂದು ಯಾವತ್ತು ಹೇಳೆ ಇಲ್ಲ.. ಸಾಧರಣವಾಗಿ ಜನಪ್ರಿಯ ನಾಯಕಿ ಮದುವೆಯಾದ ತಕ್ಷಣ ಅವ್ರ ಅಭಿಮಾನಿಗಳಿಗೆ ಕಸಿವಿಸಿಯಾಗೋದು ಸಹಜ. ಚಿತ್ತಾರದ ಹುಡ್ಗಿ ವಿಚಾರದಲ್ಲೂ ಆಗಿದ್ದು ಅದೇ.ಅಮೂಲ್ಯ ಮಾವ ಚುನಾವಣೆಗೆ ನಿಂತ ಸಂದರ್ಭದಲ್ಲಿ ಮಾವನ ಪರ ಪ್ರಚಾರ ಕಾರ್ಯದಲ್ಲೂ ಕೈ ಜೋಡಿಸಿದ್ದ ಅಮೂಲ್ಯ, ತನ್ನನ್ನು ರಾಜಕೀಯವಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಅಮೂಲ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್​ ಆರಂಭಿಸ್ತಾರೆ ಅನ್ನುವ ಸುದ್ದಿಯೂ ಓಡಾಡ್ತಿತ್ತು.

 

ಇದೀಗ ಚೆಲುವಿನ ಚಿಲುವಿನ ಚೆಲುವೆ ಅಮೂಲ್ಯ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ಸಾಗಲಿದ್ದಾರೆ ಅನ್ನೋದು ಹೆಚ್ಚುಕಡಿಮೆ ಕನ್ಫರ್ಮ್​ ಆಗಿದೆ. ಸಿನಿಮಾ ರೀ ಎಂಟ್ರಿ ಆಗುವ ಸಲುವಾಗಿಯೇ ದೇಹದ ಟೋನಿಂಗ್ ಕಾಪಾಡಿಕೊಳ್ಳಲು ಜಿಮ್ ನಲ್ಲಿ ವರ್ಕ್ ಔಟ್ ಶುರು ಮಾಡಿದ್ದಾರೆ.ಮದುವೆಯಾದ ಬಳಿಕ ತುಸು ದಪ್ಪಗಾಗಿದ್ದ ಐಸೂ ಮತ್ತೆ ಹಿಂದಿನ ಅಮೂಲ್ಯ ಚಾರ್ಮ್ ನಲ್ಲಿ ಬಣ್ಣ ಹಚ್ಚೋಕೆ ಕೊಂಚ ಸ್ಟ್ರಿಕ್ಟ್ ಆಗಿಯೇ ಪ್ರಿಪರೇಷನ್ ನಡೆಸುತ್ತಿದ್ದಾರೆ. ಜಿಮ್​​ ಟ್ರೈನರ್​ ಆದರ್ಶ್​ ಗೌಡ ಗರಡಿಯಲ್ಲಿ ಗೋಲ್ಡನ್​ ಬೇಬಿ ಜಿಮ್​ನಲ್ಲಿ ಸಕತ್​ ಕಸರತ್ತು ಮಾಡ್ತಿದ್ದಾರೆ.

 

ಅಂದಹಾಗೆ ಅಮೂಲ್ಯ ದರ್ಶನ್​ ತಂಗಿಯಾಗಿ ನಟಿಸ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ ಅದು ಇನ್ನೂ ಕನ್ಪರ್ಮ್​ ಆಗಿಲ್ಲ. ಹಾಗಾಗಿ ಯಾವಿ ಸಿನಿಮಾ ಮಾಡ್ತಾರೆ..? ರೋಲ್​ ಏನು..? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆದ್ರೆ ಐಸೂ ಸ್ಯಾಂಡಲ್​​ವುಡ್​ನಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸೋದು ಪಕ್ಕಾ.