ಸಂಜೆಯೊಳಗೆ ಅತೃಪ್ತರ ಅರ್ಜಿ ವಿಲೇವಾರಿ ಸಾಧ್ಯವಿಲ್ಲ! ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಸ್ಪೀಕರ್​​ ರಮೇಶ್ ಕುಮಾರ್!!

ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಸಂಜೆಯೊಳಗೆ ವಿಚಾರಣೆ ನಡೆಸಿ ನಾಳೆ ನಿರ್ಧಾರವನ್ನು ತಿಳಿಸುವಂತೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ಪೀಕರ್​ ಉತ್ತರಿಸಿದ್ದು, ಸಂಜೆ 6 ಗಂಟೆಯೊಳಗೆ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಸ್ಪೀಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ad


ರಾಜೀನಾಮೆಯ ಎಲ್ಲಾ 10 ಅರ್ಜಿಗಳನ್ನು ಸಂಜೆಯೊಳಗೆ ವಿಚಾರಣೆ ನಡೆಸುವುದು ಅಸಾಧ್ಯ. ವಿಧಾನಸಭೆಯ ನಿಯಮಾವಳಿಗಳ ಪ್ರಕಾರ ನೀವು ನನಗೆ ಆದೇಶಿಸುವಂತಿಲ್ಲ. ರಾಜೀನಾಮೆಯನ್ನು ಪರಿಶೀಲಿಸುವುದು ನನ್ನ ಕರ್ತವ್ಯ ಎಂದಿರುವ ರಮೇಶ್ ಕುಮಾರ್​ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.


ಆದರೆ ಸುಪ್ರೀಂ ಕೋರ್ಟ್​ ರಮೇಶ್ ಕುಮಾರ್ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ್ದು, ನಾಳೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಅತೃಪ್ತರ ರಾಜೀನಾಮೆ ಪರ್ವ ಈ ನ್ಯಾಯಾಲಯ ಮತ್ತು ಶಾಸಕಾಂಗ ನಡುವೆ ಸಿಲುಕಿಕೊಂಡಿದ್ದು ಏನಾಗಲಿದೆ ಕಾದು ನೋಡಬೇಕಿದೆ.