ದೋಸ್ತಿ ಸರ್ಕಾರಕ್ಕೆ ಮತ್ತೊಂದು ಸವಾಲು- ಮೇಯರ್​ ಚುನಾವಣೆಯಲ್ಲೂ ಜೆಡಿಎಸ್​ ಕಾಂಗ್ರೆಸ್​ ಪೈಪೋಟಿ- ಸಧ್ಯ ದೊಡ್ಡಗೌಡರ ಅಂಗಳದಲ್ಲಿ ಚೆಂಡು!

ಸರ್ಕಾರ ಉಳಿಸಿಕೊಳ್ಳೋದೇ ದೊಡ್ಡ ಸವಾಲಾಗಿರುವ ಜೆಡಿಎಸ್​ -ಕಾಂಗ್ರೆಸ್​ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಇದೀಗ ಮೇಯರ್ ಚುನಾವಣೆ ಕೂಡ ಸವಾಲಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ಇಡೀ ಬೆಂಗಳೂರು ಜನತೆಯ ತೀವ್ರ ಕುತೂಹಲಕ್ಕೂ ಕಾರಣವಾಗಿದೆ. ಮೇಯರ್​ ಆಯ್ಕೆ ಚೆಂಡು ಇದೀಗ ಕಾಂಗ್ರೆಸ್​ ಅಂಗಳ ದಾಟಿದ್ದು ಜೆಡಿಎಸ್​ನ ದೊಡ್ಡ ಗೌಡರ ಅಂಗಳದಲ್ಲಿ ಬಿದ್ದಿದೆ.

ad

 

ಜಯನಗರ ಕಾರ್ಪೊರೇಟರ್​ ಗಂಗಾಂಬಿಕಾ ಮಲ್ಲಿಕಾರ್ಜುನ್​ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್ ಮಾಡುತ್ತಿದ್ದರೇ, ಮತ್ತೊಂದೆಡೆ ಶಾಂತಿನಗರ ಕಾರ್ಪೊರೇಟರ್​ ಸೌಮ್ಯ ಶಿವಕುಮಾರ್ ಪರ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಒಕ್ಕಲಿಗ ನಾಯಕರು ಬ್ಯಾಟಿಂಗ್ ಆರಂಭಿಸಿದ್ದಾರೆ.
ಸೆ.28ರಂದು ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಬಿಬಿಎಂಪಿಯಲ್ಲಿ ದೋಸ್ತಿಗಳೇ ಆಡಳಿತ ನಡೆಸುತ್ತಿರುವುದರಿಂದ ಈಗ ಮೇಯರ್​ ಆಯ್ಕೆ ವಿಚಾರ ದೊಡ್ಡಗೌಡರ ಅಂಗಳಕ್ಕೆ ಬಂದು ನಿಂತಿದೆ. ಇಂದು ದೇವೇಗೌಡರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್​ ಜೆಡಿಎಸ್​ ಸದಸ್ಯೆ ರಮೀಳಾ ಉಮಾಶಂಕರ್​​​​ಗೆ ಉಪಮೇಯರ್​​ ಪಟ್ಟ ಬಹುತೇಕ ಕನ್​ಫರ್ಮ್​ ಆಗಿದ್ದು, ನೇತ್ರಾನಾರಾಯಣ್​​ ಮತ್ತು ಇಮ್ರಾನ್​ ಪಾಷಾ ಕೂಡಾ ಕೊನೆ ಕ್ಷಣದವರೆಗೂ ಉಪಮೇಯರ್​​​ ಪಟ್ಟಕ್ಕೆ ಪ್ರಯತ್ನ ಮಾಡ್ತಲೇ ಇದ್ದಾರೆ.