ಸ್ಯಾಂಡಲ್‌ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ- ನಿರ್ದೇಶಕ ಪವನ್ ಒಡೆಯರ್​ಗೆ ಜೊತೆಯಾದ ನಟಿ ಅಪೇಕ್ಷಾ!

ಸ್ಯಾಂಡಲ್‌ವುಡ್​ನಲ್ಲಿ ಮತ್ತೊಮ್ಮೆ ಗಟ್ಟಿಮೇಳದ ಸದ್ದು ಕೇಳಿಬಂದಿದೆ. ಹೌದು ಕನ್ನಡ ಚಿತ್ರರಂಗದ ಮತ್ತೊಂದು ಜೋಡಿ ಹಸೆಮಣೆ‌ ಏರುವುದಕ್ಕೆ ಸಜ್ಜಾಗಿದ್ದು, ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಿತು.

ad

ಕಾಫಿ ತೋಟ ಚಿತ್ರದ ನಾಯಕಿ ಬಾಗಲಕೋಟೆ ಮೂಲದ ಅಪೇಕ್ಷಾ ಪುರೋಹಿತ್ ಹಾಗೂ ಖ್ಯಾತ ನಿರ್ದೇಶಕ ಪವನ್‌ ಒಡೆಯರ್ ಹಸೆ ಮಣೆ ಏರಲಿದ್ದು, ಇಂದು ಬಾಗಲಕೋಟೆಯಲ್ಲಿ ಆರಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ , ಎರಡು ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡರು.

ಅಪೇಕ್ಷಾ ಪುರೋಹಿತ್​​ ಗೋಲ್ಡಲ್​ ಕಲರ್​​ನ ಗೌನ್​ ನಲ್ಲಿ ಮಿಂಚುತ್ತಿದ್ದರೇ, ವರ ಪವನ ಒಡೆಯರ್, ಕೆನೆಬಿಳಿಬಣ್ಣದ ಡ್ರೆಸ್​ನಲ್ಲಿ ಮಿಂಚಿದರು. ಆರತಕ್ಷತೆಗೂ ಮುನ್ನ ಕಲ್ಯಾಣಮಂಟಪದ ವರೆಗೆ ಪವನ್ ಒಡೆಯರ್ ಅವರನ್ನ ಕುದುರೆಯ ಮೇಲೆ ಮೆರವಣಿಗೆ ಮಾಡಲಾಯಿತು. ಎರಡು ಕುಟುಂಬಗಳ ಸದಸ್ಯರು,ಸ್ನೇಹಿತರು ಮೆರವಣಿಗೆಯಲ್ಲಿ ಸಖತ್ ಸ್ಟೆಪ್ಸ ಹಾಕಿ ಎಂಜಾಯ್ ಮಾಡಿದ್ರು. ಇನ್ನು ಆರತಕ್ಷತೆಯಲ್ಲಿ ಭಾಗಿಯಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಧು-ವರರಿಗೆ ಶುಭಹಾರೈಸಿದರು.