ವೀರಪ್ಪನ್ ಸಾವನ್ನಪ್ಪಿದ್ರು, ಇನ್ನು ನಿಂತಿಲ್ಲಾ ಆನೆ ದಂತ ಮಾರಾಟ.. ಹಾಗಾದ್ರೆ ಈಗ ಯಾರು ಆನೆ ದಂತ ಮಾರಾಟ ಮಾಡ್ತಾರೆ ಅಂತೀರಾ ಹಾಗಾದ್ರೆ ಈ ಸುದ್ದಿ ಓದಿ…

ಹಣದಾಸೆಗಾಗಿ ಕಾಡು ಪ್ರಾಣಿಗಳನ್ನು ಹತ್ಯೆ ಮಾಡುವ ಹೀನ ಕೃತ್ಯ ಇನ್ನೂ ರಾಜರೋಷವಾಗಿ ನಡೆಯುತ್ತಿದೆ ಎನ್ನುವ ಅನುಮಾನ ಕಾಡ್ತಾಯಿದೆ. ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪತ್ತೆಯಾಗಿರುವ ಆನೆ ದಂತ ನೋಡಿದ್ರೆ, ಕುಖ್ಯಾತ ಕಾಡುಗಳ್ಳ ವೀರಪ್ಪನ್ ನೆನಪು ಬರುತ್ತೇ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆನೆ ದಂತವನ್ನು ಸಾಗಿಸುವಾಗ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ದಾಳಿ ಮಾಡಿ ಆನೆ ದಂತವನ್ನು ವಶಪಡೆಸಿಕೊಂಡಿದ್ದಾರೆ.

 

ಕಾರವಾರ ಜಿಲ್ಲೆಯ ಹಳಿಯಾಳ ದಿಂದ ಬೆಂಗಳೂರು ‌ಕಡೇ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಖಚಿತ ಮಾಹಿತಿ ಮೇರಿಗೆ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಪೊಲೀಸರು ದಾಳಿ ಮಾಡಿ, ಒಂದು ಕಾರು, ಆನೆ ದಂತ ಹಾಗೂ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಳಿಯಾಳ ನಿವಾಸಿಗಳಾದ ಬಸ್ತ್ಯೆಂವ ಸಿದ್ದಿ, ಜೈಲಾನಿ ಗರಗ, ಮಂಜುನಾಥ ಜೋಮ್ಮನ್ನವರ ಎನ್ನುವ ಆರೋಪಿಗಳನ್ನು ಬಂಧಿಸಿ, ಅವರಿಂದ‌ 54 ಇಂಚು ಉದ್ದ ಆನೆ ದಂತ ಹಾಗೂ ಸರಕಾರಿ ಬೋರ್ಡ್ ಇರುವ ವಾಹನವನ್ನು ವಶಕ್ಕಪಡೆಯಲಾಗಿದೆ.

ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆನೆ ದಂತವನ್ನು ಕೇವಲ 10 ಲಕ್ಷ ರೂಪಾಯಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಇನ್ನೂ ಬೆಂಡಿಗೇರಿ ಪೊಲೀಸ ಇನ್ಸ್ಪೆಕ್ಟರ್ ಡಿ ಸಂತೋಷಕುಮಾರ ನೇತೃತ್ವದಲ್ಲಿ ಎನ್ ಬಿ ಕೆಂಚಣ್ಣವರ, ಜಿ‌ ಪಿ ರಜಪೂತ, ಎಸ್ ಆರ್ ಇಚ್ಚಂಗಿ ಎಂ ಡಿ ರಾಠೋಡ ಎಚ್ ಎಂ ನಾಯಕ, ಕನಕಪ್ಪ ರಗಣಿ ಚಾಣಾಕ್ಷತನದ ದಾಳಿಯಿಂದ ಕುಖ್ಯಾತ ಆರೋಪಿಗಳು ಪತ್ತೆ ಮಾಡಲು ಶ್ರಮಿಸಿದ್ದಾರೆ.

ಕೇವಲ ಒಂದು ಆನೆ ದಂತ ಮಾತ್ರ ಪತ್ತೆಯಾಗಿರೋದರಿಂದ ಇನ್ನೊಂದು ಆನೆ ದಂತದ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ. ಆನೆಯನ್ನು‌ ಹತ್ಯೆ ಮಾಡಿ ಆನೆದಂತವನ್ನು ಪಡೆದಿದ್ದಾರೋ ಅಥವಾ ಸಾವನ್ನಪ್ಪಿರೋ ಆನೆಯ ದಂತ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಬೇಕಾಗಿದೆ. ಹಾಗೇ ಕಾರಿಗೆ ಸರಕಾರಿ ಬೋರ್ಡ್ ಇರೋದರಿಂದ ಈ ಕುರಿತು ಸಹ ತನಿಖೆ ನಡೆಯಬೇಕಾಗಿದೆ.‌ ಹಾಗಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ ಕಮೀಷನರ್ ಎಮ್ ಎನ್ ನಾಗರಾಜ್ ಈ ಪ್ರಕರಣವನ್ನು ಅರಣ್ಯ ಇಲಾಖೆ ವರ್ಗಾವಣೆ ಮಾಡಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುವದು ಅಂತಾ ಹೇಳಿದ್ದಾರೆ. ಸಂಪೂರ್ಣವಾದ ತನಿಖೆ ಮಾಡಿದಾಗ ಮಾತ್ರ ಆನೆ ದಂತ ರಹಸ್ಯ ಬಯಲಾಗುತ್ತೇ…