ಮಹಿಳೆಗೆ ಸ್ಟುಪಿಡ್​ ಎಂದ ಅಶೋಕ್ ಖೇಣಿ- ಇಷ್ಟಕ್ಕೂ ಅಲ್ಲೇನಾಯ್ತು ಗೊತ್ತಾ?!

ಸದಾಕಾಲ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗೋ ಮಾಜಿ ಶಾಸಕ ಅಶೋಕ್ ಖೇಣಿ ಮತ್ತೊಮ್ಮೆ ಮಹಿಳೆಯೊಬ್ಬರ ಮೇಲೆ ದರ್ಪ ತೋರಿ ವಿವಾದಕ್ಕೆ ಸಿಲುಕಿದ್ದಾರೆ. ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಕಾರ್​ನ್ನು ರಿವರ್ಸ್​ ತೆಗೆಯಲಾಗದೇ ಪರದಾಡುತ್ತಿದ್ದರೇ ಅಶೋಕ್ ಖೇಣಿ ಅವರಿಗೆ ಅವಾಜ್ ಹಾಕಿ ಸುದ್ದಿಯಾಗಿದ್ದಾರೆ.

ad

ಇಂದು ಸಂಜೆ 5 ಗಂಟೆ ವೇಳೆ ಅಶೋಕ್ ಖೇಣಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಕ್ರೆಸೆಂಟ್​ ರಸ್ತೆಯಲ್ಲಿ ಮಹಿಳೆಯೊರ್ವಳು ಕಾರು ಚಲಾಯಿಸುತ್ತಿದ್ದು, ಟ್ರಾಫಿಕ್​ ಸೃಷ್ಟಿಯಾಗಿರೋದರಿಂದ ಮಹಿಳೆ ಕಾರ್​ ರಿವರ್ಸ್ ತೆಗೆಯಲಾಗದೇ ತೊಂದರೆಗೊಳಲಾಗಿದ್ದರು.

ಈ ವೇಳೆ ತಮ್ಮ ಕಾರಿನಿಂದ ಇಳಿದು ಟ್ರಾಫಿಕ್​ ಜಾಂ ಸ್ಥಳಕ್ಕೆ ತೆರಳಿದ ಅಶೋಕ್ ಖೇಣಿ ಕಾರು ಚಲಾಯಿಸಲಾಗದೇ ಕಂಗಾಲಾಗಿದ್ದ ಮಹಿಳೆಗೆ ಸ್ಟುಪಿಡ್​ ಎಂದು ನಿಂದಿಸಿ ಅವಾಜ್ ಹಾಕಿದರು. ಅಷ್ಟೇ ಅಲ್ಲ ಆಕೆಯ ಕಾರ್​ ಮೇಲೆ ಜೋರಾಗಿ ಗುದ್ದಿ ಅವಾಂತರ ಸೃಷ್ಟಿಸಿದರು.
ಕೇವಲ ಅಶೋಕ ಖೇಣಿ ಮಾತ್ರವಲ್ಲದೇ ಅಶೋಕ್ ಖೇಣಿ ಗನ್​ಮ್ಯಾನ್​ಗಳು ಕೂಡ ಮಹಿಳೆಗೆ ಅವಾಜ್​ ಹಾಕಿ ಗಲಾಟೆ ಎಬ್ಬಿಸಿದ್ದಾರೆ. ಇನ್ನು ಘಟನೆ ಬಳಿಕ ಅಶೋಕ್ ಖೇಣಿ ನಡೆದೇ ಡಿಕೆಶಿ ನಿವಾಸಕ್ಕೆ ತೆರಳಿದರು. ಇನ್ನು ಅಶೋಕ್ ಖೇಣಿ ಮಹಿಳೆಗೆ ಅವಾಜ್ ಹಾಕಿ ನಿಂದಿಸಿದ ವಿಡಿಯೋ ಇದೀಗ ವೈರಲ್​ ಆಗಿದೆ.