ಕಾರವಾರದೊಂದಿಗೂ ಇತ್ತು ಅಟಲ್ ನಂಟು-ಅಜಾತಶತ್ರುವಿನ ಭೇಟಿಯ ಸ್ಮರಿಸುತ್ತ

ಕಾರವಾರ : ದೇಶ ಸುತ್ತಿ ಕೋಶ ಓದಿದ ಅಜಾತ ಶತ್ರು ದೇಶದ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಕಾರವಾರದಲ್ಲೂ ಒಂದೆರೆಡು ಸುತ್ತು ಹಾಕಿದ್ರು ಎನ್ನೋದಕ್ಕೆ ಅವರ ಅಂದಿನ ಛಾಯಾಚಿತ್ರ ಇಂದು ಸಾಕ್ಷಿಕರಿಸುತ್ತಿವೆ..ಪ್ರಧಾನಿಯಾಗಿದ್ದಾಗಲೂ ಹಾಗು ಹಿಂದೆಯೂ ಕೂಡಾ ಉತ್ತರ ಕನ್ನಡ ಜಿಲ್ಲೆ ಸುತ್ತಿದ್ರು ಎನ್ನೋದಕ್ಕೆ ಎಳೆಎಳೆಯಾದ ಮಾತು ನಾಯಕರಿಂದ ಹೊರಬರುತ್ತಿವೆ. ಅಂದು ಘಟಿಸಿದ ಕೆಲ ಘಟನೆಯ ಮೆಲಕು ಹಾಕುವ ಸ್ಟೋರಿ ಓದಿ

ಉತ್ತರ ಕನ್ನಡ ಜಿಲ್ಲೆಯ ಕಡಲನಗರಿ ಕಾರವಾರ ಸೇರಿದಂತೆ ಮಲೆನಾಡಿಗೂ ಅಟಲಬಿಹಾರಿ ವಾಜಪೇಯಿ ಬೇಟಿ ನೀಡಿದ್ರು. ಇನ್ನೂ ಇದು ರಾಜಕೀಯ ಕ್ಷೇತ್ರಕ್ಕೆ ಸಂಭದಿಸಿ ಜಿಲ್ಲೆಗೆ ಬಂದಿದ್ರೆ ರಾಜಕೀಯ ಹೊರತು ಪಡಿಸಿ ಧಾರ್ಮಿಕ ವಿಚಾರದಲ್ಲೂ ವಾಜಪೇಯಿ ಜಿಲ್ಲೆಗೆ ಆಗಮಿಸಿದ್ರು. ಜಿಲ್ಲೆಯ ಸೋಂದಾ ಮಠಕ್ಕೆ ವಾಜಪೇಯಿ ಆಗಮಿಸಿದ್ದು ಇಂದು ನೆನಪು ಮಾತ್ರ..ಇಲ್ಲಿನ ಗಂಗಾಧರೇಶ್ವರ ಸ್ವಾಮಿಜಿಯವರ ಪಟ್ಟಾಭೀಷೆಕದ ಐದನೇ ವರ್ಷದ ವರ್ಷಾಚರಣೆಗೆ ವಾಜಪೇಯಿವರನ್ನ ಆಮಂತ್ರಿಸಲಾಗಿತ್ತು ೧೯೯೧ರಲ್ಲಿ ಈ ಕಾರ್ಯಕ್ರಮದಲ್ಲಿ ವಾಜಪೇಯಿ ಭಾಗವಹಸಿ ಸ್ವಾಮಿಜಿ ಆಶೀರ್ವಾದ ಪಡೆದಿದ್ರು.. ಹಾಗೆ ವಾಜಪೇಯಿ ಕಾರವಾರ ಮೂಲಖ ದೆಹಲಿ ಹೋದಂತ ಸಂದರ್ಭದಲ್ಲಿ ಕಾರವಾರದ ಪ್ರವಾಸಿಮಂದಿರಲ್ಲಿ ತಂಗಿ ಇಲ್ಲಿನ ಬಿಜೆಪಿ ನಾಯಕರ ಮನೆಯ ಹೋಳಿಗೆ ಊಟ ಸವಿದು ವಾವ್ ಅಂತಾ ಹೇಳಿ ಹೋಗಿದ್ದು ಇಂದು ಕೂಡಾ ನೆನಪಿಸಿಕೊಳ್ಳುತ್ತಿದ್ದಾರೆ.

ಕಡಲನಗರಿ ಕಾರವಾರ ಸೇರಿದಂತೆ ಮಲೆನಾಡು ಭಾಗಕ್ಕೂ ವಾಜಪೇಯಿ ಭೇಟಿ ನೀಡಿದ್ರು ಎನ್ನೋದನ್ನ ಇಂದು ಜಿಲ್ಲೆಯ ಕೆಲ ಬಿಜೆಪಿ ನಾಯಕರು ಚಾಯಾಚಿತ್ರ ಸಮೇತ ಅಂದಿನ ಘಟನೆಯನ್ನ ಮೆಲಕು ಹಾಕಿ ವಾಜಪೇಯಿಯವರನ್ನ ನೆನಪಿಸಿಕೊಳ್ಳುತ್ತಿದ್ದಾರೆ..ರಾಜಕೀಯ ಹಾಗು ರಜಕೀಯೇತರ ಧಾರ್ಮಿಕ ವಿಚಾರವಾಗಿಯೂ ವಾಜಪೇಯಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ರು,.ಹಾಗೆ ೨೦೦೦ನೇ ಇಸ್ವಿಯಲ್ಲಿ ಪ್ರಧಾನಿಯ ಹುದ್ದೆಯಲ್ಲಿದ್ದಾಗ ಇಲ್ಲಿನ ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಬೇಟಿ ಕೊಟ್ಟು ಇಲ್ಲಿನ ಹಿರಿಯ ಅಧಿಕಾರಿ ವರ್ಗದವರ ಜೊತೆ ಚರ್ಚೆ ನಡೆಸಿ ಘಟಕದ ಸುತ್ತ ಪರಿಶೀಲನೆ ನಡೆಸಿದ್ದು ಇಂದು ನೆನಪು ಮಾತ್ರ..೧೯೮೦ರ ಹೊತ್ತಲ್ಲಿ ಜನಸಂಘದಲ್ಲಿದ್ದಾಗ ಜಿಲ್ಲೆಯ ಅಂಕೋಲಾ ಹಾಗು ಕಾರವಾರ ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿರೋದನ್ನ ಇಂದು ಕೂಡಾ ಬಿಜೆಪಿ ನಾಯಕರ ಜನಮಾನಸದಲ್ಲಿ ಅಜಾರಮರವಾಗಿ ಉಳಿದಿದೆ ಅಂದಿನ ನೆನಪು..ಉತ್ತರ ಕನ್ನಡ ಜಿಲ್ಲೆಯ ಕರವಾಳಿಯಲ್ಲೂ ವಾಜಪೇಯಿ ನೆನಪು ಇಂದಿಗೂ ಇದೆ, ಕನಸಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಯೋಜನೆ ಇಂದು ಕಾರ್ಯಪ್ರಗತಿಯಲ್ಲಿರೋದು ವಾಜಪೇಯಿ ಇಲ್ಲಿನ ಜನರ ಜನಮಾನಸದಲ್ಲಿ ಹುದುಗಿ ಹೋಗಿದ್ದಾರೆ. ಅಂದಿನ ನೆನಪನ್ನ ಇಂದು ಎಳೆಎಳೆಯಾಗಿ ಒಂದಂಶವನ್ನು ಮರೆಯದೆ ಜಿಲ್ಲೆಯ ನಾಯಕರು ನೆನಪಿಟ್ಟು ಕೊಂಡಿದ್ದು ಗ್ರೇಟ್