6 ರೂಪಾಯಿಗೇ ನಡೆದೇ ಹೋಯ್ತು ಹಲ್ಲೆ- ರಕ್ತದ ಮಡುವಿನಲ್ಲಿ ಬಿದ್ದ ಕಂಡಕ್ಟರ್!

 6 ರೂಪಾಯಿ ತಡವಾಗಿ ನೀಡಿದಕ್ಕೆ ಕಂಡಕ್ಟರ್ ಕಮ್ ಡ್ರೈವರ್ ಮೇಲೆ ಪ್ರಯಾಣಿಕನೊಬ್ಬ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆದಿದೆ. ಯುನೂಸಸಾಬ್ ಬಡದಾಳ(41) ಹಲ್ಲೆಗೊಳಗಾದ ಕಂಡಕ್ಟರ್ ನಾಗಿದ್ದು, ಸುಲೇಮಾನ್ ಹಚ್ಚಾಳ ಎಂಬಾತನಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ.
ನಿನ್ನೆ ಬಸ್ ಟಿಕೆಟ್ ಹಿಂದೆ ರೂ. 6. ಚಿಲ್ಲರೆ ಬರೆದುಕೊಟ್ಟಿದ್ದ ಕಂಡಕ್ಟರ್ ಯುನೂಸಸಾಬ್. ಆದ್ರೆ, ಬಸ್ ನಿಂದ ಇಳಿದ ಸುಲೇಮಾನ್ ಗೆ 6 ರೂಪಾಯಿ ನೀಡುವುದು ತಡವಾಗಿದೆ. ಅದಕ್ಕಾಗಿ ಇಬ್ಬರು ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇನ್ನು ಈ ಜಗಳವನ್ನು ನಿನ್ನೆ ಕೆಎಸ್‌ಆರ್‌ಟಿಸಿ ಡಿಸಿ ಕಚೇರಿಯಲ್ಲಿ ಬಗೆಹರಿಸಿ ಪ್ರಯಾಣಿಕ ಸುಲೇಮಾನ್ ರೂ. 6 ಪಡೆದಿದ್ದ.

ad

ಆದ್ರೆ, ಇಂದು ಅದೇ ಕಂಡಕ್ಟರ್ ಯುನೂಸಸಾಬ್ ಕರ್ತವ್ಯದ ಮೇಲೆ ಕಂಡು ತಾಲೂಕಿನ ತಾಂಬಾಕ್ಕೆ ಹೋದಾಗ ರಾಡ್ ನಿಂದ ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಯುನೂಸಸಾಬ್ ಗೆ ಇಂಡಿ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…