ಹುಬ್ಬಳ್ಳಿಯಲ್ಲಿ ಬೀದಿಗೆ ಇಳಿದ ಅಯ್ಯಪ್ಪ ಸ್ವಾಮಿ ಭಕ್ತರು..

 

  ಶಬರಿಮಲೈನ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಹುಬ್ಬಳ್ಳಿ ಶಿರೂರ ಪಾರ್ಕ್ ಅಯ್ಯಪ್ಪ ದೇವಸ್ಥಾನ ಕಮಿಟಿ ಹಾಗೂ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ
ನಡೆಸಲಾಯಿತು…


ಅಯ್ಯಪ್ಪ ಸ್ವಾಮಿ ಭಕ್ತರು ಸುಪ್ರೀಂ ಕೋರ್ಟ್ ತೀರ್ಪು ಮರು‌ ಪರಿಶೀಲನೆಗೆ ಒತ್ತಾಯಿಸಿ, ನಗರದ ಈಶ್ವರ ದೇವಸ್ಥಾನದಿಂದ ಮೂರು ಸಾವಿರ ಮಠದವರೆಗೆ ಪ್ರತಿಭಟನೆ‌ ಮೆರವಣಿಗೆ ನಡೆಸಿದ ಭಕ್ತರು ಸ್ವಾಮಿ ಅಯ್ಯಪ್ಪ, ಸ್ವಾಮಿ ಶರಣಂ ಅಯ್ಯಪ್ಪ. ಶರಣಂ ಶರಣಂ ಅಯ್ಯಪ್ಪ ಘೋಷಣೆ ಕೂಗುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪು ಮರು ಪರಿಶೀಲನೆ ಮಾಡಬೇಕು ಎಂದು ಘೋಷಣೆ ಕೂಗಿದರು.

ಸಾವಿರಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅದರಲ್ಲೂ ಮಹಿಳಾ ಭಕ್ತರು ಕೂಡ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಶಬರಿ ಮಲೆ ಸನ್ನಿಧಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ತೀರ್ಪು ಮರು ಪರಿಶೀಲನೆ ಮಾಡಬೇಕೆಂದು ಅಗ್ರಹಿಸಿದರು.