ಜುಲೈ 27 ರಂದು ಮನೆಯಿಂದ ಹೊರಬರಲ್ಲ ಬಿ ಎಸ್ ಯಡಿಯೂರಪ್ಪ !! ನಾಲ್ಕು ಗೋಡೆ ಮಧ್ಯೆ ಏನ್ಮಾಡ್ತಾರೆ ಗೊತ್ತಾ ಮಾಜಿ ಸಿಎಂ ?

ಜುಲೈ 27 ರಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಮನೆಯಿಂದ ಹೊರಬರಲ್ಲ. ರಾಜ್ಯ ಸರಕಾರವನ್ನು ಟೀಕಿಸಲೂ ಹೋಗಲ್ಲ. ಎಂತದ್ದೇ ಕಾರ್ಯಕ್ರಮವಿದ್ದರೂ ಜುಲೈ 27 ರ ನಂತರವೇ !. ಹೌದು ಇಂತದ್ದೊಂದು ನಿರ್ಧಾರವನ್ನು ಬಿ ಎಸ್ ಯಡಿಯೂರಪ್ಪ ಕೈಗೊಂಡಿದ್ದಾರೆ.

ಜುಲೈ 27 ರಂದು ಗ್ರಹಣ ಸಂಭವಿಸಲಿದ್ದು,ಅಂದು ಬಿ ಎಸ್ ಯಡಿಯೂರಪ್ಪ ಯಾವ ಕೆಲಸವನ್ನೂ ಮಾಡಲ್ಲ. ತಾನು ಮಾತ್ರವಲ್ಲ ಯಾರೂ ಕೂಡಾ ಗ್ರಹಣದ ದಿನ ಕೆಲಸ ಮಾಡಬೇಡಿ ಎಂದು ಬಿ ಎಸ್ ವೈ ಕರೆ ನೀಡಿದ್ದಾರೆ.”ಜುಲೈ 27 ರಂದು ಸಂಭವಿಸಲಿರುವ ಗ್ರಹಣ ಅತ್ಯಂತ ಕೆಟ್ಟದ್ದು. ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳಬೇಡಿ” ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

 

ಹೌದು, ಶಿವಮೊಗ್ಗದ ಪಕ್ಷದ ಕಚೇರಿಯಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಮತ್ತು ಮುಖಂಡರ ಸಭೆ ನಡೆಸಿದ ಅವರು, ಗ್ರಹಣ ಸಮಯದಲ್ಲಿ ಯಾವುದೇ ಅವಘಡ ಸಂಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋದನ್ನು ಬಿಟ್ಟು, ಬೇರೆ ದಾರಿ ಇಲ್ಲ. ರಾಜ್ಯದ ಜನರು ಸಹ ಗ್ರಹಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ಗ್ರಹಣ ಕಳೆದ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳೋದಾಗಿ ಯಡಿಯೂರಪ್ಪ ಹೇಳಿದ್ರು.