ಬೆಲೆಏರಿಕೆಗೆ ಬಂದ್​- ನಗರದಾದ್ಯಂತ ಕಟ್ಟೆಚ್ಚರ ವಹಿಸಿದ ಖಾಕಿ ಪಡೆ!

 

ad


ಬೆಂಗಳೂರಿನಲ್ಲಿ ಇವತ್ತು ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಬಂದ್ ಶಾಂತಿಯುತವಾಗಿ ನಡೆಯುತ್ತಿದೆ. ಬಂದ್ ಹಿನ್ನಲೆ ನಗರ ಪೊಲೀಸ್ರು ವ್ಯಾಪಕ ಬಂದೋಬಸ್ತ್ ನಿಯೋಜಿಸಿದ್ದು ಯಾವುದೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಬಂದ್ ಹಿನ್ನಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಪೊಲೀಸ್ರನ್ನ ಭದ್ರತೆಗೆ ನಿಯೋಜಿಸಲಾಗಿದ್ದು ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸ್ರು ಬಂದ್ ಹಾಗೂ ಪ್ರತಿಭಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದಲ್ಲದೆ ೩೦ ಕೆ ಎಸ್ ಆರ್ಪಿ ತುಕಡಿ ೩೦ ಸಿ ಎ ಆರ್ ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಪಡೆಯನ್ನ ಸಹ ನೀಯೋಜಿಸಲಾಗಿದೆ.

ಅಲ್ಲದೆ ನಗರದಲ್ಲಿ ಪ್ರತಿನಿತ್ಯ ಕಾರ್ಯ ನಿರ್ವಹಿಸುವ ೨೫೦ ಕ್ಕೂ ಹೆಚ್ಚು ಹೊಯ್ಸಳ ವಾಹನಗಳು ಸಹ ಬಂದ್ ಭದ್ರತೆಯ ಸೆಕ್ಯೂರಿಟಿಗೆ ನಿಯೋಜನೆಯಾಗಿವೆ. ಇನ್ನು ಬಂದ್​ನ ಬೃಹತ ರ್ಯಾಲಿಗಳು ಮಾತ್ರ ಬಾಕಿ ಇದ್ದು ಅವನ್ನು ಯಶಸ್ವಿಯಾಗಿ ನಿಭಾಯಿಸಲು ಪೊಲೀಸ್ರು ಸನ್ನದ್ಧರಾಗಿದ್ದಾರೆ.