ಬಿಡಿಎ ನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..! ಚುನಾವಣಾ ನೀತಿಸಂಹಿತೆ ಹೊತ್ತಲ್ಲೇ 35 ಸೈಟ್​ ಅಕ್ರಮ ರಿಜಿಸ್ಟ್ರೇಷನ್​..!!

ಇತ್ತ ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಬಹುಕೋಟಿ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಅಥವಾ ಆಯುಕ್ತರ ಅನುಮತಿಯನ್ನೇ ಪಡೆಯದೆ ಬಿಡಿಎ ಉಪ ಕಾರ್ಯದರ್ಶಿ ಸತೀಶ್​ ಬಾಬು ಅವರು ಟ್ರಿನಿಟಿ ಪ್ಲಾಟ್​ ಓನರ್ಸ್​ ಅಸೋಸಿಯೇಷನ್​ಗೆ ಅರ್ಕಾವತಿ ಲೇಔಟ್​ನಲ್ಲಿ 60/40 ಅಳತೆಯ 35 ಸೈಟ್​ಗಳನ್ನು ಅಕ್ರಮವಾಗಿ ರಿಜಿಸ್ಟ್ರೇಷನ್​ ಮಾಡಿಕೊಟ್ಟಿದ್ದಾರೆ.

ad

ಈ ಬಗ್ಗೆ ಅಲರ್ಟ್ ಆಗಿರುವ ಬಿಡಿಎ ಆಯುಕ್ತ ರಾಕೇಶ್​ ಸಿಂಗ್, ಕಚೇರಿ ಆದೇಶ ಹೊರಡಿಸಿದ್ದು, 35 ಸೈಟ್​ ರಿಜಿಸ್ಟ್ರೇಷನ್​ ಕ್ಯಾನ್ಸಲ್​ ಮಾಡಲು, ಕೇವಿಯಟ್​ ಹಾಕಲು ಹಾಗೂ ಸತೀಶ್​ ಬಾಬು ಅಮಾನತಿಗೆ ಶಿಫಾರಸು ಮಾಡುವಂತೆ ಆದೇಶ ನೀಡಿದ್ದಾರೆ.

ಭಾರಿ ಮೊತ್ತದ ಲಂಚ ಪಡೆದು ಈ ರೀತಿ ಅಕ್ರಮ ರಿಜಿಸ್ಟ್ರೇಷನ್​ ಮಾಡಿಕೊಡಲಾಗಿದೆ ಎನ್ನಲಾಗಿದ್ದು, ಬಹುಕೋಟಿ ಬೆಲೆ ಬಾಳುವ ನಿವೇಶನಗಳನ್ನು ಬೋಗಸ್​ ವ್ಯಕ್ತಿಗಳಿಗೆ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.

ಬಿಡಿಎನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

ಬಿಡಿಎನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..! #BtvNews #BDA

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಏಪ್ರಿಲ್ 23, 2019