ಹುಡುಗಿಯರನ್ನು ಚುಡಾಯಿಸೋ ಮುನ್ನ ಹುಶಾರ್ – ಕಲ್ಬುರ್ಗಿಯಲ್ಲಿ ಕಣಕ್ಕಿಳಿದಿದೆ ನಿರ್ಭಯ ಟೀಂ!

ನಿಮ್ಗೆ ಹುಡ್ಗೀರನ್ನ ಚುಡಾಯಿಸೋ ಚಟ ಇದ್ಯಾ. ಹಾದಿಬೀದಿಯಲ್ಲಿ ಸುತ್ತುತ್ತಾ ಹೆಣ್ಮಕ್ಕಳಿಗೆ ಕಿರುಕುಳ ನೀಡೋ ವಿಕೃತ ಮನಸ್ಸಿದೆಯಾ.. ಹಾಗಿದ್ರೆ  ನಿಮ್ಮ ಎಲ್ಲಾ ದುರ್ಗುಣಗಳನ್ನ ದೂರವಿಡಿ..ಇಲ್ಲದಿದ್ರೆ ಜೈಲಿಗೆ ಹೋಗಲು ರೆಡಿ ಆಗಿ..ಹೌದು ಬೀದಿಕಾಮಣ್ಣರ ಸದೆಬಡಿಯಲು ಕಲಬುರ್ಗಿ ಮಹಿಳಾ ಪೋಲೀಸರು ಮಫ್ತಿಯಲ್ಲಿ ಫೀಲ್ಡಿಗಿಳಿದಿದ್ದಾರೆ.. ಹೌದು ಬಿಸಿಲೂರ ಮಹಿಳಾ ಖಾಕಿ ಪಡೆ ವಿನೂತನ ಕಾನ್ಸೆಪ್ಟೊಂದನ್ನ ಜಾರಿಗೆ ತಂದಿದೆ..

ad

 

ಕಾಲೇಜಿನ ಅಕ್ಕಪಕ್ಕ ನಿಂತು ಹಿಡ್ಗೀರನ್ನ ಚುಡಾಯಿಸೋ ಲೈನ್ ಹೊಡೆಯೋ ಪೋಕರಿಗಳಿಗೆ ಹಿಡಿಯೋಕೆ ಮಹಿಳಾ ಪೋಲೀಸರು ಮಫ್ತಿಯಲ್ಲಿಯೇ ಡ್ಯೂಟಿ ಮಾಡ್ತಿದ್ದಾರೆ ಆದ್ರೂ ಇವ್ರು ಪೋಲೀಸರು ಅಂತ ಗೊತ್ತಿಲ್ಲದ ಕೆಲವರು ಚುಡಾಯಿಸಿ ಅರೆಷ್ಟ ಮಾಡ್ತಾರೆ… ಕಲಬುರ್ಗಿ ನಗರ ದಿನ ದಿಂದ ದಿನಕ್ಕೆ ನಗರ ಬಲೆದಂತೆ ಕಲಬುರ್ಗಿಯಲ್ಲಿ ಕ್ರೈಂ ಕೂಡಾ ಜಾಸ್ತಿಯಾಗ್ತಿದೆ. ಇತ್ತಿಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನ ತಡೆಯಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ನಿರ್ಭಯ ಟೀಮ್ ರೆಡಿಮಾಡಿದ್ದಾರೆ..  ನಗರದಲ್ಲಿ ನಡೇಯು ಚೈನ್ ಸ್ನಾಚಿಂಗ್ ಜನ್ರಿಗೆ ತೊಂದರೆ ಕೊಡೋರಿಗೆ ಮಟ್ಟಹಾಕಲು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ…ನಗರದಲ್ಲಿ ಪ್ರತಿ ಪೊಲೀಸ್ ಸ್ಟೇಷನ್ ಗೆ 3 ರಂತೆ  ಬೈಸಿಕಲ್ ಬೈಕ್ ಪೆಟ್ರೋಲಿಂಗ್ ಮಾಡಲು 25 ಬೈಕ್ ಬೀಟ್ ಮಾಡಲಿವೆ ..

.ಅಲ್ಲದೆ ಯಾರದ್ರು ಅಪಾಯದಲ್ಲಿದ್ದಾಗ ಅವರಿಗೆ ಸಹಾಯಕ್ಕೆ ಬರಲು ಬೈಕ್ ಗಳಿಗೆ ಜಿಪಿಎಸ್ ಅಳವಡಿಸಿ ಅಂಥಹ ಸ್ಥಳಕ್ಕೆ ಕೂಡ್ಲೆ ಹೋಗುವ ವ್ಯವಸ್ತೆ ಮಾಡಿದ್ದಾರೆ.. ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಮಹಿಳೆ ಡ್ರೈವ್ ಮಾಡ್ತಾರೆ ಪ್ರತಿ ನಿತ್ಯ ನಗರದಲ್ಲಿ ಫೀಲ್ಡೇ ಇಳಿಯಲಿದ್ದಾರೆ.. ಇಷ್ಟೆಲ್ಲಾ ಸಂದೇಶವನ್ನ ಸಾರಲು ಕಾರಣ  ಇಚ್ಚಿತಿನ ದಿನಗಳಲ್ಲಿ ಮಹಿಳೆ ಯವರು ಮಕ್ಕಳ ಮೇಲೆ ದೌರ್ಜನ್ಯ ಸರಗಳ್ಳತನ ಪುಂಡ ಪೋಕರಿಗಳನ್ನ ಮಟ್ಟ ಹಾಕಲು ಸನ್ನದ್ದವಾಗಿದೆ… ಇದಕ್ಕಾಗಿಯೇ ನಗರದ ಸುಪರ್ ಮಾರ್ಕೇಟ್ ನಲ್ಲಿ ಕಮಾಂಡ್ ಕಂಟ್ರೋಲ್ ರೂಂ ಓಪನ್ ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆ ಇದ್ದವರಿಗೆ ಇಲ್ಲಿಗೆ ಕರೆತಂದು ಅವರಿಗೆ ಕೌನ್ಸಿಲಿಂಗ್ ಮಾಡ್ತಾರೆ….

ಹೀಗಾಗಿ ಲೈಂಗಿಕ ಕಿರುಕುಳ ನೀಡೋ ಪ್ರತಿಯೊಬ್ಬರಿಗೂ ಒಂದು ಎಚ್ಚರಿಕೆ ಗಂಟೆ ಎಂಬಂತ ಬಿಂಬಿಸಲು ಖಾಕಿ ಪಡೆ ಮುಂದಾಗಿದೆ..ಇಂತಹ ಆಪರೇಷನ್ ನಗರದ ಎಲ್ಲ ಹುಡ್ಗೀರ ಕಾಲೇಜು ಮತ್ತು ಹಾಸ್ಟೆಲ್ ಸುತ್ತಮುತ್ತಲ ನಡೆಯುತ್ತಿದೆ..ಅಷ್ಟೆ ಅಲ್ಲ ನಿಮಗೇನಾದ್ರೂ ಕಾಮುಕರು ತೊಂದ್ರೆ ಕೊಟ್ರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ರೆ ಸಾಕು ಕೆಲವೇ ಕ್ಷಣದಲ್ಲಿ ಅಲ್ಲಿ ಹಾಜರ್ ಆಗ್ತಾರೆ ಅಂತ ಪೋಲೀಸ್ ಟೀಂ ಹುಡ್ಗೀರಿಗೆ ಧೈರ್ಯ ತುಂಬಿದೆ. ಅಷ್ಟೆ ಅಲ್ಲ ರೋಡ್ ರೋಮಿಯೋಗಳ  ಸೆರೆಹಿಡಿಯಲು ಸಿಸಿಟಿವಿ ಕಣ್ಗಾವಲಿದೆ..ಕಾರಣ  ಲೈಂಗಿಕ ಕಿರುಕುಳ ನೀಡೋರನ್ನ ಮತ್ತು ಅತ್ಯಾಚಾರಕ್ಕೆ ಮುಂದಾಗೋ ಕಾಮುಕರನ್ನ ಗೂಂಡಾ ಕಾಯಿದೆಯಲ್ಲಿ ಕೇಸ್ ಮಾಡಲು ಕಾನೂನಲ್ಲಿ ಅವಕಾಶವಿದೆಯಂತೆ..ಒಟ್ಟಾರೆ ಇಂತಹ ಪ್ರಕರಣ ತಡೆಗಟ್ಟಲಿ ಅನ್ನೋ ಉದ್ದೇಶ ಪೋಲೀಸರದ್ದು. ಅಲ್ಲದೇ ಪೊಲೀಸರ ಈ ಆಪರೇಷನ್ ಕಾರ್ಯ ಸಾರ್ವಜನಿಕರಿಗೆ ಸಂತಸ ತಂದಿದೆ..