ಕನ್ನಡ ವಿರೋಧಿ ಧೋರಣೆ ಪ್ರಶ್ನಿಸಿದರೇ ಹುಶಾರ್- ಬೀಳುತ್ತೆ ಭರ್ಜರಿ ಕೇಸ್​- ಕನ್ನಡಪರ ನಿಂತಿದ್ದಕ್ಕೆ ಬಿಟಿವಿ ಮೇಲೆ ಬಿತ್ತು ಎಫ್ಆಯ್​ಆರ್​!

 

ad


ಕರ್ನಾಟಕದಲ್ಲೇ ಕನ್ನಡಿಗರಿಗೆ ಬೆಲೆ ಇಲ್ವಾ? ಇಂತಹದೊಂದು ಪ್ರಶ್ನೆ ಹುಟ್ಟೋಕೆ ಕಾರಣವಾಗಿರೋದು ಬೆಳ್ಳಂದೂರಿನ ದೇವಾಲಯವೊಂದರ ದುಸ್ಥಿತಿ. ಹೌದು ಕರ್ನಾಟಕದಲ್ಲೇ ಇರುವ ದೇವಾಲಯವೊಂದರ ಸಿಬ್ಬಂದಿ ಕನ್ನಡವನ್ನು ಬಳಸದ್ದನ್ನು ಪ್ರಶ್ನಿಸಿದ್ದಕ್ಕೆ ಕನ್ನಡಪರ ಚಾನೆಲ್ ಬಿಟಿವಿ ವಿರುದ್ಧ ದೂರು ದಾಖಲಿಸಲಾಗಿದ್ದು, ಕರ್ನಾಟಕದಲ್ಲೇ ಕನ್ನಡಿಗರಿಗೆ ರಕ್ಷಣೆ ಇಲ್ವಾ..? ಪ್ರಶ್ನೆ ಹುಟ್ಟುಹಾಕಿದೆ.

 

 


ಹೌದು ಅಗಸ್ಟ್ 12 ರಂದು ಬೆಳ್ಳಂದೂರಿನ ಶ್ರೀವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದ ಅನುನೇತ್ರ ಎಂಬ ಕನ್ನಡದ ಹೆಣ್ಣುಮಗಳು ಅಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿರುವುದು ಗಮನಿಸಿದ್ದರು. ಅಷ್ಟೇ ಅಲ್ಲ ಕನ್ನಡವನ್ನು ಬಳಸುವಂತೆ ಕೋರಿದ್ದರು. ಆದರೇ ಅದಕ್ಕಾಗಿ ಅವರಿಗೆ ಧಮಕಿ ಹಾಕಲಾಗಿದ್ದು, ಹೀಗಾಗಿ ಅನುನೇತ್ರ ತಮ್ಮ ಮೇಲಾದ ದೌರ್ಜನ್ಯದ ಕುರಿತು ಪೋಸ್ಟ್​ ಹಾಕಿದ್ದರು. ಹೀಗಾಗಿ ಅನುನೇತ್ರಅವರಿಂದ ಮಾಹಿತಿಪಡೆದ ಬಿಟಿವಿನ್ಯೂಸ್​ ಈ ಬಗ್ಗೆ ವರದಿ ಮಾಡಿತ್ತು.

 

ಕರ್ನಾಟಕದಲ್ಲಿ ಕನ್ನಡಿಗರಿಗೆ ಎದುರಾಗಿರುವ ದುಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತ್ತು. ಹೀಗೆ ಕನ್ನಡಪರ ಕಾಳಜಿ ಮೆರೆದು ವರದಿ ಮಾಡಿದ್ದಕ್ಕೆ ಬಿಟಿವಿ ವಿರುದ್ಧ ದೇವಾಲಯದ ಧರ್ಮದರ್ಶಿ ಪುರುಷೋತ್ತಮ ಎಂಬುವವರು ದೂರು ದಾಖಲಿಸಿದ್ದು, ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡ ಪರ ನಿಂತಿದ್ದ ಬಿಟಿವಿನ್ಯೂಸ್​ನ್ನು ಕಾನೂನಿನ ಮೂಲಕ ಬೆದರಿಸುವ ಪ್ರಯತ್ನ ನಡೆಸಿದೆ. ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನವಾಗ್ತಿರೋದು ಮಾತ್ರವಲ್ಲ ಪ್ರಶ್ನಿಸಿದವರ ಧ್ವನಿಯನ್ನು ಅಡಗಿಸುವ ಪ್ರಯತ್ನ ರಾಜ್ಯ ರಾಜಧಾನಿಯಲ್ಲೇ ನಡಿತಾ ಇರೋದು ಮಾತ್ರ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಸರ್ಕಾರ ಇದಕ್ಕೆ ಸ್ಪಂದಿಸಿ, ತಪ್ಪಿತಸ್ಥರ ಕ್ರಮಕೈಗೊಳ್ಳಬೇಕಿದೆ.