ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೂಲೆ- ರಾಜಕೀಯ ದ್ವೇಷಕ್ಕೆ ಹರಿದ ನೆತ್ತರು!

ad

ಕೊಡಗು ಜಿಲ್ಲೆಯಲ್ಲಿ ರಾಜಕೀಯ ದ್ವೇಷಕ್ಕೆ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ ನಡೆದಿದೆ. ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಎದುರೇ ತಿಲಕರಾಜು ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಜೆಡಿಎಸ್ ಸದಸ್ಯ ನಾಣಯ್ಯ ಮತ್ತು ಬಿಜೆಪಿ ಸದಸ್ಯ ತಿಲಕ್​ರಾಜು ಮಧ್ಯೆ ಹಲವು ವರ್ಷಗಳಿಂದ ರಾಜಕೀಯ ದ್ವೇಷ ಇತ್ತು ಎನ್ನಲಾಗಿದೆ. ನಾಣಯ್ಯ ತನ್ನ ಬಳಿ ಇದ್ದ ರಿವಾಲ್ವರ್​ನಿಂದ ತಿಲಕ್​ ರಾಜು ಎದೆಗೆ ಗುಂಡಿಟ್ಟಿದ್ದಾನೆ. ತಿಲಕ್​ ರಾಜು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಮರಗೋಡು ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.