ಡಿಕೆಶಿಗೆ ಐಟಿ ಕಿರುಕುಳದ ಹಿಂದಿದೆ ಬಿಜೆಪಿ !! ಸ್ಪೋಟಕ ದಾಖಲೆ ಬಿಡುಗಡೆ ಮಾಡಿದ ಸಂಸದ ಡಿ ಕೆ ಸುರೇಶ್

ದ ರುವಾರಿ ಡಿ ಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಮತ್ತು ಬಂಧನ ಪ್ರಯತ್ನದ ಹಿಂದಿದ್ದ ಕಾಣದ ಕೈ ಇದೀಗ ಬಯಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ದೂರಿನಂತೆಯೇ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ದಾಖಲೆಯನ್ನು ಸಂಸದ ಡಿ ಕೆ ಸುರೇಶ್ ಇಂದು ಬಿಡುಗಡೆಗೊಳಿಸಿದ್ದಾರೆ.

ad


ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಡಿ ಕೆ ಶಿವಕುಮಾರ್ ಅವರ ವಿರುದ್ಧ ಕೇಂದ್ರ ಸರಕಾರ ಒಂದಿಲ್ಲೊಂದು ರೀತಿಯಲ್ಲಿ ಮುಗಿ ಬೀಳ್ತಲೇ ಇದೆ. ಅದರಲ್ಲೂ ಇಂದೂ ಸೇರಿ ಎರಡು ಬಾರಿ ಡಿ ಕೆ ಶಿವಕುಮಾರ್ ಇನ್ನೇನು ಬಂಧನವಾಗೇ ಬಿಡ್ತಾರೆ ಎನ್ನುವವರೆಗೆ ಸುದ್ದಿಯಾಗಿತ್ತು. ಬಿಜೆಪಿಯತ್ತಾ ಕೈ ಶಾಸಕರು ಹೋಗದಂತೆ ತಡೆದು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿಸಿದ್ದ ಡಿ ಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಮತ್ತು ಬಂಧನದ ಪ್ರಯತ್ನದ ಹಿಂದಿದ್ದ ಕಾಣದ ಕೈಗಳನ್ನು ಇಂದು ಡಿ ಕೆ ಸುರೇಶ್ ಬಹಿರಂಗಗೊಳಿಸಿದ್ದಾರೆ.

2017 ರಲ್ಲಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪರೇ ಐಟಿ ಇಲಾಖೆಯ ನೇರ ತೆರಿಗೆ ವಿಭಾಗಕ್ಕೆ ಪತ್ರ ಬರೆದು ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ವಿರುದ್ದ ತನಿಖೆ ನಡೆಸುವಂತೆ ಸೂಚಿಸಿದ್ದರು. ಈ ರೀತಿ ರಾಜಕೀಯ ಕಾರಣಕ್ಕಾಗಿ ಪ್ರತಿಪಕ್ಷದವರೊಬ್ಬರು ಬರೆದ ಪತ್ರಕ್ಕೆ ಕೇಂದ್ರ ತನಿಖಾ ಸಂಸ್ಥೆ ಪ್ರತಿಕ್ರಿಯಿಸುವ ಮೂಲಕ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಂಸದ ಡಿ ಕೆ ಸುರೇಶ್ ಮಾಡಿದರು.

 

ಐಟಿ ಮತ್ತು ಇಡಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಧಾನಿ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ನಾನು ಪ್ರಧಾನಿ ಬೇಟಿಗೆ ಅವಕಾಶ ಕೇಳಿದ್ದು, ಅವಕಾಶ ನೀಡಿದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ತನಿಖಾ ಸಂಸ್ಥೆಗಳ ದುರುಪಯೋಗ ಮಾಡುತ್ತಿರುವುದರ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡುತ್ತೇನೆ. ಐಟಿ, ಇಡಿ, ಸಿಬಿಐಯನ್ನು ಬಿಜೆಪಿಯು ತನ್ನ ಮೋರ್ಚಾಗಳಂತೆ ಬಳಸುತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದ್ರು. ಆದ್ರೆ ಡಿ ಕೆ ಶಿವಕುಮಾರ್ ಮಾತ್ರ ನನಗ್ಯಾವ ನೋಟೀಸೂ ಬಂದಿಲ್ಲ, ಎಫ್ ಐಆರ್ ಕೂಡಾ ದಾಖಲಾಗಿಲ್ಲ ಅಂದ್ರು.

ಒಟ್ಟಾರೆ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ಡಿ ಕೆ ಶಿವಕುಮಾರ್ ಮೇಲೆ ದಾಖಲಾದ ಐಟಿ ಪ್ರಕರಣವನ್ನು ಬಳಸುತ್ತಿದೆಯೇ ಎಂಬ ಪ್ರಶ್ನೆ ಮೂಡಿರುವುದಂತೂ ನಿಜ. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ತಾಳಕ್ಕೆ ಕುಣಿಯುತ್ತಿದೆ ಎಂಬ ಬಿಜೆಪಿಯೇತರರ ಆರೋಪಕ್ಕೆ ಬಿ ಎಸ್ ವೈ ಪತ್ರ ಪುಷ್ಠಿ ನೀಡಿದ್ದು, ಸತ್ಯಾಸತ್ಯಾತೆ ಇನ್ನಷ್ಟೆ ಹೊರಬರಬೇಕಿದೆ.