ಶಾಸಕ ಮುನಿರತ್ನ ಮನೆಯ ಬಳಿ ಸ್ಪೋಟ, ಓರ್ವ ಸಾವು. ಅಲ್ಲಿ ನಡೆದಿದ್ದೇನು ಗೊತ್ತಾ?

ಕಾಂಗ್ರೆಸ್ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್ ಮನೆ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಫೋಟ ಸಂಭವಿಸಿದ್ದು ಸ್ಫೋಟದಲ್ಲಿ ವ್ಯಕ್ತಿಯೋರ್ವನ ದೇಹ ಛಿದ್ರಗೊಂಡಿದೆ.
ಆರ್ ಆರ್ ನಗರದ ಶಾಸಕ ಮುನಿರತ್ನ ಅವರ ಮನೆಯ ಬಳಿ ಇಂದು ಮುಂಜಾನೆ ತೀವ್ರತರಹದ ಸ್ಪೋಟ ಸಂಭವಿಸಿದ್ದು ಅವರ ಮನೆಯ ಕೆಲಸಗಾರ ವೆಂಕಟೇಶ ಎಂಬುವರು ಮ್ರತಪಟ್ಟಿದ್ದಾರೆ.
ಹೌದು. ಮುನಿರತ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ದೇಹ ಸ್ಪೋಟದ ರಭಸಕ್ಕೆ ಛಿದ್ರ ಛಿದ್ರವಾಗಿದೆ.  ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಅಲ್ಲಿ ಯಾವ ಸಿಲೆಂಡರ್ ಸಹಿತ ಇಲ್ಲ ಎನ್ನುವೂ ಕೆಲವರು ಹೇಳುತ್ತಿದ್ದಾರೆ. ಇದು ಭಯೋತ್ಪಾದನೆಯ ಕೃತ್ಯವೋ ಅಥವಾ ಆಕಸ್ಮಿಕ ಘಟನೆಯೋ ಎಂಬುರ ಬಗ್ಗೆಯೂ ತನಿಖೆ ನಡೀತಾ ಇದೆ.  ಇದೀಗ ಬಂದ ಮಾಹಿತಿ ಪ್ರಕಾರ ಕೆಮಿಕಲ್ ಕ್ಯಾನ್ ಸ್ಪೋಟಗೊಂಡಿದೆ ಅಂತ ಹೇಳಲಾಗ್ತಿದೆ.

ಘಟನಾ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.