ಕಲ್ಬುರ್ಗಿಯಲ್ಲಿ ಮತ್ತೆ ಹರಿದ ನೆತ್ತರು- ಬಿಜೆಪಿ ಮುಖಂಡರ ಪುತ್ರನ ಭರ್ಬರ ಹತ್ಯೆ!

ಕಲ್ಬುರ್ಗಿಯಲ್ಲಿ ಮತ್ತೊಮ್ಮೆ ರಕ್ತದೋಕುಳಿ ಹರಿದಿದೆ. ನಿನ್ನೆ ತಡರಾತ್ರಿ ಸ್ಥಳೀಯ ಬಿಜೆಪಿ ನಾಯಕ ಲಕ್ಷ್ಮಣ ಬಿಳಗಿ ಪುತ್ರ ರಾಹುಲ್ ಬಿಳಗಿ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ. ಮೃತ ರಾಹುಲ್ ಬಿಳಗಿ ಆಳಂದ ತಾಲೂಕಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್ ಬಿಳಗಿಯವರ ಪುತ್ರನಾಗಿದ್ದು, ವೈಯಕ್ತಿಕ ಅಥವಾ ರಾಜಕೀಯ ದ್ವೇಷದಿಂದ ಹತ್ಯೆ ನಡೆದಿರಬಹುದೆಂತು ಶಂಕಿಸಲಾಗಿದೆ.
ರಾಹುಲ್ ಬೀಳಗಿ ತನ್ನ ಬುಲೇಟ್ ಬೈಕ್‌ನಲ್ಲಿ ಆಳಂದನಿಂದ ತಮ್ಮ ಸ್ವಗ್ರಾಮ ಭೂಸನೂರು ಗ್ರಾಮಕ್ಕೆ ತೆರಳುತ್ತಿರುವಾಗ ಮಾರ್ಗಮಧ್ಯದಲ್ಲಿ ಆಗಂತುಕರು ಬುಲೇರೋ ವಾಹನದಲ್ಲಿ ಬೈಕ್‌ನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಆತನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಕೊಲೆ ರಾಜಕೀಯ ತಿರುವು ಪಡೆದುಕೊಂಡಿದ್ದು, ನನ್ನ ಮೇಲಿನ ರಾಜಕೀಯ ದ್ವೇಷಕ್ಕಾಗಿಯೇ ನನ್ನ ಮಗನ ಕೊಲೆ ಮಾಡಲಾಗಿದೆ ಎಂದು ಅವರ ತಂದೆ ಲಕ್ಷ್ಮಣ್ ಬೀಳಗಿ ಆರೋಪಿಸಿದ್ದಾರೆ.

ಹಂತಕರ ಬಂಧನಕ್ಕೆ ಆಗ್ರಹಿಸಿ ಕಲಬುರ್ಗಿಯ ದಲಿತ ಸಂಘಟನೆಗಳ ಕಾರ್ಯಕರ್ತರು ಕೊಲೆಯಾದ ರಾಹುಲ್ ಬೀಳಗಿಯ ಶವವನ್ನು ಕಲಬುರಗಿ ಡಿಸಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಮೃತನ ಕುಟುಂಬಕ್ಕೆ 4 ಲಕ್ಷ 12 ಸಾವಿರ ರೂಪಾಯಿ ಚೆಕ್ ನೀಡಿದ ನಂತ್ರ ಸಂಬಂಧಿಕರು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಮೃತದೇಹವನ್ನು ಭೂಸನೂರು ಗ್ರಾಮಕ್ಕೆ ತೆಗೆದುಕೊಂಡು ಹೋದರು. ಡಿಸಿ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣವನ್ನ ದಾಖಲಿಸಿಕೊಂಡಿರುವ ಆಳಂದ ಠಾಣೆ ಪೊಲೀಸರು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ..

Avail Great Discounts on Amazon Today click here