ಮುಂದುವರಿದ ಬಿಎಂಟಿಎಫ್​ ಭ್ರಷ್ಟಾಚಾರ- ಪಿಎಸ್ಐ ಟ್ರಾನ್ಸಫರ್​ ಆರ್ಡರ್​ಗೂ ಬೆಲೆ ಇಲ್ಲ!

 

ad


ಬಿಎಂಟಿಎಫ್​​ನ ಬ್ರಹ್ಮಾಂಡ ಭ್ರಷ್ಟಾಚಾರ ಇನ್ನು ಮುಂದುವರಿದಿದೆ. ಬಿಎಂಟಿಎಫ್​ನ ಭ್ರಷ್ಟ ತನಿಖಾಧಿಕಾರಿ ದೀಪಕ್​​​​ ವರ್ಗಾವಣೆ ಆದೇಶ ಹೊರಬಿದ್ದು ನಾಲ್ಕು ದಿನಕಳೆದ್ರೂ ದೀಪಕ ರಿಲೀವ್ ಮಾಡೋಕೆ ಹಿರಿಯ ಅಧಿಕಾರಿಗಳೇ ಸಿದ್ಧರಿಲ್ಲ ಎನ್ನಲಾಗ್ತಿದೆ. ಇದಕ್ಕೆ ಕಾರಣ ದೀಪಕ ವಸೂಲಿ ಕಮಾಯಿ.
ಹೌದು ಮೂಲಗಳ ಪ್ರಕಾರ ಬಿಎಂಟಿಎಫ್​ ಪಿಎಸ್​ಐ ದೀಪಕ, ಎಲ್ಲೆಡೆಯಿಂದ ಚೆನ್ನಾಗಿ ವಸೂಲಿ ಮಾಡಿ ಹಿರಿಯ ಅಧಿಕಾರಿಗಳಿಗೆ ನೀಡುತ್ತಾನೆ ಎನ್ನಲಾಗುತ್ತಿದೆ. ಹೀಗಾಗಿ ಆತನಿಗೆ ಟ್ರಾನ್ಸಫರ್ ಆದರೂ ಕೂಡ ಹಿರಿಯ ಅಧಿಕಾರಿಗಳೇ ಅಲ್ಲಿಂದ ತೆರವು ಮಾಡಿಲ್ಲ. ಹಿರಿಯ ಅಧಿಕಾರಿಗಳೇ ರಕ್ಷಣೆ ನೀಡಿ ಅದೇ ಸ್ಥಾನದಲ್ಲಿ ಮುಂದುವರೆಸಿದ್ದಾನೆ.

ರಾಜಕಾಲುವೆ ಒತ್ತುವರಿ ಪ್ರಕರಣದಲ್ಲಿ ಲಂಚ ಪಡೆದು ಬಿ ರಿಪೋರ್ಟ್​ ಸಲ್ಲಿಸಿದ್ದ ದೀಪಕ್​​ ವಿರುದ್ಧ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು. ಇಲಾಖೆ ಅಧೀನ ಕಾರ್ಯದರ್ಶಿಗಳು ಕೂಡ್ಲೇ ಕ್ರಮ ಕೈಗೊಳ್ಳಲು ಬಿಬಿಎಂಪಿ ಆಯುಕ್ತರು ಮತ್ತು ಬಿಎಂಟಿಎಫ್​​​ ಮುಖ್ಯಸ್ಥ ಪ್ರಶಾಂತ್​​​ಕುಮಾರ್ ಠಾಕೂರ್​ಗೆ ಲಿಖಿತ ಆದೇಶ ನೀಡಿದ್ದರು. ಆನಂತ್ರ ಅಲ್ಲಿಂದ ದೀಪಕ್​​ ವರ್ಗಾವಣೆ ಮಾಡಿ ಆ ಜಾಗಕ್ಕೆ ಯೋಗಾನಂದ ಸೋನಾರ್​​ ಎಂಬುವರನ್ನು ನಿಯೋಜಿಸಲಾಗಿದೆ. ಆದ್ರೂ ದೀಪಕ್​ ಸ್ಥಾನ ತೆರವು ಮಾಡಿಲ್ಲ.