ಕೆ.ಆರ್​.ಎಸ್​ನ ಹೊರಹರಿವಿಗೆ ಬ್ರೇಕ್​- ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ!

 

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಜನರ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇನ್ನು ಅತ್ತ ಕೊಡಗಿನಲ್ಲಿ ಮಳೆ ಕಡಿಮೆ ಆಗುತ್ತಿದ್ದಂತೆ ಕೆ.ಆರ್.ಎಸ್‌.ನ ನೀರಿನ ಹೊರ ಹರಿವಿಗೆ ಬ್ರೇಕ್ ಹಾಕಲಾಗಿದೆ. ಡ್ಯಾಂ ತುಂಬಿದ 40 ದಿನಗಳ ನಂತರ ನೀರಿನ ಹೊರ ಹರಿವನ್ನು ನಿಲ್ಲಿಸಲಾಗಿದೆ.

 

 

ಜುಲೈ 14 ರಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನದಿಗೆ ನೀರನ್ನು ಬಿಡಲಾಗುತ್ತಿತ್ತು, ಪ್ರತಿ ನಿತ್ಯ ಕನಿಷ್ಠ 15 ಸಾವಿರ ಕ್ಯೂಸೆಕ್‌ನಿಂದ 1.50 ಲಕ್ಷ ಕ್ಯೂಸೆಕ್ ವರೆಗೂ ನದಿಗೆ ನೀರನ್ನು ಹರಿಸಲಾಗಿತ್ತು.ಆದರೆ ಈಗ ಒಳ ಹರಿವಿನ ಪ್ರಮಾಣ ಕಡಿಮೆ ಆಗಿರುವುದರಿಂದ ನದಿಗೆ    ಬಿಡುತ್ತಿದ್ದ ನೀರನ್ನು ನಿಲ್ಲಿಸಲಾಗಿದ್ದು, ನಾಲೆಗಳಿಗೆ ಮಾತ್ರ ನೀರನ್ನು ಹರಿಸಲಾಗುತ್ತಿದೆ.

 

ಇಂದಿನ ನೀರಿನ ಮಟ್ಟ ತಿಳಿಯೋದಾದರೇ ಸದ್ಯಕ್ಕೆ 122.25 ಅಡಿ ನೀರಿದ್ದು, ಒಳ ಹರಿವಿನ ಪ್ರಮಾಣ 28,438ಕ್ಯೂಸೆಕ್ ಇದೆ‌. ಅಣೆಕಟ್ಟೆಯ ಗರಿಷ್ಟ ಮಟ್ಟ 124.80 ಅಡಿಗಳಿದೆ.ಅಂತೂ ಹೊರ ಹರಿವಿನ ಪ್ರಮಾಣವನ್ನು ನಿಲ್ಲಿಸಿರೋದು ನದಿ ಪಾತ್ರದ ಜನತೆಗೆ ನಿಟ್ಟುಸಿರು ಬಿಟ್ಟಿದ್ದಾರೆ.