ಸಚಿವರ ಮನೆಯಲ್ಲಿ ಉಪಹಾರ ಕೂಟ- ದೋಸೆ ಸವಿಯುತ್ತ ದೋಸ್ತಿ ಸರ್ಕಾರದ ರಾಜಕೀಯ ಚರ್ಚೆ ಎಂದ್ರು ಡಿ.ಕೆ.ಶಿ ಶಿವಕುಮಾರ್​!

 

ad


ಇವತ್ತು ದೋಸ್ತಿ ಸರ್ಕಾರದ ಸಚಿವರೆಲ್ಲ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸೇರಿದ್ದರು. ಆದರೇ ಇದು ಯಾವುದೇ ರಾಜಕೀಯ ಚರ್ಚೆಗಲ್ಲ. ಬದಲಾಗಿ ಉಪಹಾರಕ್ಕೆ ಕೂಟಕ್ಕೆ. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​​​​​ ಅವ್ರು ದೋಸ್ತಿ ಸರ್ಕಾರದ ಸಚಿವರಿಗೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಉಪಾಹಾರ ಕೂಟ ಏರ್ಪಡಿಸಿದ್ದರು.
ಸರ್ಕಾರಿ ನಿವಾಸದಲ್ಲಿ ಏರ್ಪಡಿಸಿದ್ದ ಉಪಹಾರ ಕೂಟಕ್ಕೆ ಬಹುತೇಕ ಸಚಿವರು ಮತ್ತು ನಾಯಕರು ಹಾಜರಾಗಿದ್ದರು. ಡಿಸಿಎಂ ಡಾ.ಜಿ.ಪರಮೇಶ್ವರ್​​​, ಆರ್​​.ವಿ.ದೇಶಪಾಂಡೆ, ಕೃಷ್ಣ ಭೈರೇಗೌಡ,ಪ್ರಿಯಾಂಕ್​​ ಖರ್ಗೆ, ಪುಟ್ಟರಂಗಶೆಟ್ಟಿ, ಜಮೀರ್​​​​ ಅಹ್ಮದ್​ ಖಾನ್​​​​​, ವೆಂಕಟರಮಣಪ್ಪ ಸೇರಿ ಬಹುತೇಕ ಸಚಿವರು ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ.

ಆದರೇ ಕಾಂಗ್ರೆಸ್​ನಲ್ಲಿ ಅಸಮಧಾನದ ಕಿಡಿ ಹಚ್ಚಿದ್ದ ಸಚಿವ ರಮೇಶ್​ ಜಾರಕಿಹೊಳಿ ಮತ್ತು ರಾಜಶೇಖರ್​​ ಪಾಟೀಲ್​​ ಮಾತ್ರ ಬಾಂಬೈ ಪ್ರವಾಸದ ನೆಪದಲ್ಲಿ ಗೈರಾಗಿದ್ದರು.ಉಪಹಾರ ಕೂಟದಲ್ಲಿ ಮುಳಬಾಗಿಲು ದೋಸೆ ಉಪಹಾರ ಕೂಟದ ಸ್ಪೆಷಲ್ ತಿಂಡಿಯಾಗಿದ್ರೆ, ಇಡ್ಲಿ, ವಡೆ, ಚೌಚೌ ಬಾತ್, ಮಸಾಲೆ ದೋಸೆ, ಸೆಟ್ ದೋಸೆ, ಪೂರಿ-ಸಾಗು, ನೀರ್ ದೋಸೆ, ಪೊಂಗಲ್ ಹೀಗೆ ಹಲವು ಬಗೆಯ ಖಾದ್ಯಗಳಿದ್ದವು.

 

ಸಚಿವ ಸಂಪುಟ ವಿಸ್ತರಣೆ, ಪುನರ್​​ ರಚನೆ ಮತ್ತು ನಿಗಮಮಂಡಳಿ ನೇಮಕದ ಹೊತ್ತಿನಲ್ಲಿ ಡಿಕೆಶಿ ಅವ್ರು ಕರೆದಿರುವ ಉಪಹಾರ ಕೂಟ ವಿಶೇಷತೆ ಪಡೆದುಕೊಂಡಿದೆ. ಇನ್ನು ಉಪಹಾರ ಕೂಟದ ಬಳಿಕ ಮಾತನಾಡಿದ ಸಚಿವ ಡಿಕೇಶಿ, ಮಾಜಿ ಸಿಎಂ ಸಿದ್ಧರಾಮಯ್ಯನವರ ಸಲಹೆಯಂತೆ ಉಪಹಾರ ಕೂಟ ಎರ್ಪಡಿಸಿದ್ದೇನೆ. ಈ ವೇಳೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂದೆ ಒಂದೊಂದು ಸಚಿವರ ಮನೆಯಲ್ಲೂ ಉಪಹಾರ ಕೂಟದ ಹೆಸರಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಉಪಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಮಾಡುತ್ತೇವೆ. ಸಚಿವ ಸಂಪುಟದಲ್ಲಿ ಯಾವುದೇ ಖಾತೆ ಬದಲಾವಣೆ ಇಲ್ಲ ಎಂದರು.