ಫರ್ಸ್ಟ್​ನೈಟ್​​​ ದಿನವೇ ವಧು ಕಿಡ್ನಾಪ್​- ಪೊಲೀಸರು ತಲೆನೇ ಕೆಡಿಸಿಕೊಳ್ತಿಲ್ಲ ಅಂತಾ ಹುಡುಗಿ ಮನೆಯವರ ಆರೋಪ!

 

ಅಂತೂ ಇಂತೂ ಮದ್ವೆ ಆಯ್ತು ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ನವ ಜೋಡಿಗಳಿಗೆ ಮೊದಲ ರಾತ್ರಿ ದಿನವೇ ಆಪತ್ತು ಕಾದಿತ್ತು.. ನವ ವಧು ರೂಮ್ ಗೆ ಹೋಗೋ ಮುಂಚೆನೇ ಕಿಡ್ನಾಪ್ ಮಾಡಿದ್ರು ಕಿರಾತಕರು.. ಕೊಪ್ಪಳದ ಗಂಗಾವತಿಯಲ್ಲಿ ಇಂತಹದೊಂದು ಸಿನಿಮೀಯ ರೀತಿಯ ಘಟನೆ ನಡೆದಿದ್ದು, ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ ೨ ಕುಟುಂಬಗಳ ಒಪ್ಪಂದದಿಂದ ಮದುವೆಯೊಂದು ನಡೆದಿತ್ತು. ಹುಡುಗಿಯ ತವರು ಮನೆ ಗಂಗಾವತಿ ತಾಲೂಕಿನ ಗುಡುರು ಗ್ರಾಮ. ಮದುವೆ ಬಳಿಕ ಹಿರಿಯರು ನಿಶ್ಚಯಿಸಿದಂತೆ ಹುಡುಗಿಯ ತವರು ಮನೆಯಲ್ಲೇ ಮೊದಲ ದಿನದ ಪ್ರಸ್ತ ಕಾರ್ಯಕ್ರಮ ಇತ್ತು. ಎಲ್ಲಾ ಅಂದುಕೊಂಡಂತೆ ನಡೆದಿದ್ದರೇ ನವದಂಪತಿ ಹೊಸಜೀವನ ಆರಂಭಿಸಬೇಕಿತ್ತು.

 

ಆದರೇ ಮೊದಲರಾತ್ರಿ ದಿನ ವರನ ರೂಮಿಗೆ ಹೊರಟಿದ್ದ ಹುಡುಗಿಯನ್ನು ಅದಾಗಲೇ ಕಾದಿದ್ದ ಕಿರಾತಕರ ತಂಡ ಕಿಡ್ನಾಪ್​ ಮಾಡಿ ಪರಾರಿಯಾಗಿದೆ.ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು ೬ ಜನ ಸಹಚರರು ಸೇರಿ ಹುಡುಗಿಯನ್ನು ಕಿಡ್ನಾಪ್ ಮಾಡಿದ್ರು ಎನ್ನಲಾಗಿದ್ದು, ಹುಡುಗಿ ಮನೆಯವರು ಹಲವು ಕಡೆ ಹುಡುಕಿದ್ರು ಏನು ಪ್ರಯೋಜನವಾಗಿಲ್ಲ.

ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆ ಸಮೀಪದ ಕಾರಟಗಿ ಪೊಲೀಸ್ ಠಾಣೆಗೆ ಕಿಡ್ನಾಪ್ ಮಾಡಿದವರ ವಿರುದ್ಧ ದೂರು ನೀಡಲು ಕುಟುಂಬಸ್ಥರು ಹೋಗಿದ್ದಾರೆ. ಆದ್ರೆ ಪೊಲೀಸರು ಮಾತ್ರ ಕಾಟಾಚಾರಕ್ಕೆ ಎಂಬಂತ್ತೆ ದೂರು ಸ್ವೀಕರಿಸಿ ತನಿಖೆ ಕೈಗೊಳ್ಳದೆ ಕೂತಿದ್ದಾರೆ. ಪ್ರಕರಣ ದಾಖಲಾಗಿ ಇವತ್ತಿಗೆ ಮೂರು ದಿನ ಕಳೆದರೂ ದೂರು ನೀಡಿದವರಲ್ಲಿ ಯಾರೊಬ್ಬರನ್ನು ಕರೆದು ವಿಚಾರಣೆ ನಡೆಸಿಲ್ಲಾ ಎನ್ನಲಾಗಿದೆ. ಇನ್ನು ಯಾವ ಕಾರಣಕ್ಕೆ ವಧುವಿನ ಕಿಡ್ನಾಪ್​ ನಡೆದಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೇ ಕಿಡ್ನಾಪ್ ಮಾಡಿದವರು ನಮ್ಮ ಕಣ್ಣ ಮುಂದೆನೇ ಓಡಾಡುತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ತನಿಖೆ ನಡೆಸುತ್ತಿಲ್ಲ ಅಂತ ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.