ಸಾವಿನ ಎದುರು ನಿಂತು ಗೆದ್ದ ಪ್ರಯಾಣಿಕರು! ಇದು ನೀವು ನೋಡ್ಲೇಬೇಕಾದ ವಿಡಿಯೋ!!

ಆತ ಅಪಘಾತ ತಪ್ಪಿಸಲು ರಸ್ತೆಯ ಅಂಚು ತಲುಪಿದ್ದ, ಆದರೆ ಅಲ್ಲಿ ಬಾಯ್ತೆರೆದು ಕಾದಿದ್ದು, ದೊಡ್ಡ ಪ್ರಪಾತ. ಇದು ಸಾವಿನ ಅಂಚಿನಿಂದ ಬದುಕಿ ಬಂದವರ ಕತೆ. ಹೌದು ಅಪಘಾತ ತಪ್ಪಿಸುವ ಭರದಲ್ಲಿ ಚಾಲಕನೊರ್ವ ಬಸ್​ನ್ನು ಸೇತುವೆ ಅಂಚಿಗೆ ಕೊಂಡೊಯ್ದಿದ್ದು, ಅದೃಷ್ಟವಶಾತ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ad

ಕಲಬುರಗಿ ಜಿಲ್ಲೆ ಕನಕಪುರ ಗ್ರಾಮದ ಬಳಿ ಎನ್‌ಈಕೆಆರ್‌ಟಿಸಿ ಬಸ್ ಸೇತುವೆ ಅಂಚಿಗೆ ತಲುಪಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಎದುರಿಗೆ ವೇಗವಾಗಿ ಲಾರಿಯೊಂದು ಬಂದಿದ್ದು, ಲಾರಿಗೆ ಬಸ್​ ಡಿಕ್ಕಿಯಾಗೋದನ್ನು ತಪ್ಪಿಸಲು ಬಸ್ ಚಾಲಕ ಬಸ್​ನ್ನು ರಸ್ತೆಯ ಅಂಚಿಗೆ ಕೊಂಡೊಯ್ದಿದ್ದು, ಅದು ಸೇತುವೆಯ ಅಂಚು ತಲುಪಿದೆ.

ಕಷ್ಟಪಟ್ಟು ಸೇತುವೆಯ ಅಂಚಿನಲ್ಲಿ ಚಾಲಕ ಕಷ್ಟಪಟ್ಟು ಬಸ್ ನಿಲ್ಲಿಸಿದ್ದಾರೆ.  ಕೆಲವರು ಪ್ರಾಣ ಉಳಿಸಿಕೊಂಡರೆ ಸಾಕಪ್ಪ ಎಂದು ಬಸ್ಸಿನ ಕಿಟಕಿ ಮೂಲಕ ಹೊರಗೆ ಜಂಪ್ ಮಾಡಿದ್ದಾರೆ.ಮತ್ತೆ ಕೆಲವು ವಿದ್ಯಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಮರ್ಜೆನ್ಸಿ ಡೋರ್ ತೆಗೆದು ಜಂಪ್ ಮಾಡಿದ್ದಾರೆ.

ಸುಮಾರು 59ಕ್ಕೂ ಹೆಚ್ಚು ಪ್ರಯಾಣಿಕರು ಎನ್‌ಈಕೆಆರ್‌ಟಿಸಿ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ.
ಲಾರಿ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ. ಇನ್ನು ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪುನರ್ಜನ್ಮ ಪಡೆದ ಪ್ರಯಾಣಿಕರು ಚಾಲಕನಿಗೆ ಹ್ಯಾಟ್ಸಾಫ್ ಹೇಳಿದ್ದಾರೆ.