ಸಾರಿಗೆ ಇಲಾಖೆಯವರು ಕತ್ತರಿಸಿದ ಆ ಕೇಕ್ ಹೇಗಿತ್ತು ಗೊತ್ತಾ?

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಅಧಿಕಾರಿಗೆ ಕುಟುಂಬದವರು ಅವರದ್ದೇ ಸ್ಟೈಲ್ ನಲ್ಲಿ ಶುಭಾಶಯ ಕೋರಿದ್ದಾರೆ. ಅದೇನು ಅಂತೀರಾ ಈ ವರದಿ ನೋಡಿ.

ad

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕ್ರಣ್ಣ ಪತ್ತಾರ ನಿವೃತ್ತಿ ದಿನದಂದು ಕುಟುಂಬದ ಸದಸ್ಯರು ಮಾಡಿಸಿದ ಕೇಕ್ ಸಾರಿಗೆ ಸಂಸ್ಥೆಯ ರೀತಿಯಲ್ಲೇ ಇತ್ತು. ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಘಟಕ 1ರಲ್ಲಿ  ತಾಂತ್ರಿಕ ಸಿಬ್ಬಂದಿಯ ಪಾರುಪತ್ತೆದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಮನೆಯವರು ಮಾಡಿಸಿದ ಕೇಕ್ ನಿವೃತ್ತಿಯ ಸಮಯದಲ್ಲಿ ಮತ್ತಷ್ಟು ಖುಷಿ ನೀಡಿದೆ.