ಮತ್ತೆ ಮುಂದಕ್ಕೆ ಹೋಯ್ತು ಸಚಿವ ಸಂಪುಟ ವಿಸ್ತರಣೆ- ಇಂದಲ್ಲ ನಾಳೆ ಅನ್ನೋ ತಂತ್ರಕ್ಕೆ ಅಂಟಿಕೊಂಡ ದೋಸ್ತಿ ಸರ್ಕಾರ!

ad

ದೋಸ್ತಿ ಸರ್ಕಾರದ ಸಚಿವ ಸಂಪುಟ ಸೇರುವ ಕನಸಿನಲ್ಲಿದ್ದ ಸಚಿವಸ್ಥಾನಾಕಾಂಕ್ಷಿಗಳಿಗೇ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಹೌದು ದೋಸ್ತಿ ಸರ್ಕಾರದ ಸಂಪುಟ ಪುನರ್​​ ರಚನೆ ಲೋಕಸಭಾ ಚುನಾವಣೆಯವರೆಗೂ ನಡೆಯೋದು ಡೌಟ್​. ಮೊದಲು ವಿಧಾನಪರಿಷತ್ ಚುನಾವಣೆ ಬಳಿಕ ಸಂಪುಟ ಪುನರ್ ರಚನೆ ಎಂದಿದ್ದ ನಾಯಕರು, ಇದೀಗ ವಿಧಾನ ಉಪಚುನಾವಣೆ ಬಳಿಕ ಪುನರ್ ರಚನೆ ಎನ್ನುತ್ತಿದ್ದಾರೆ.
ಆದ್ರೆ ಉಪಚುನಾವಣೆ ಮುಗಿಯುವ ಹೊತ್ತಿಗೆ ನವೆಂಬರ್ ಕಳೆದಿರುತ್ತೆ. ಡಿಸೆಂಬರ್ ವೇಳೆಗೆ ಲೋಕಸಭೆ ಎಲೆಕ್ಷನ್​​​ ಹವಾ ಶುರುವಾಗುತ್ತೆ. ಹೀಗಾಗಿ ಸಂಪುಟ ಪುನರ್​ ರಚನೆ ಬಹುತೇಕ ಡೌಟ್​. ಹೀಗಾಗಿ ಸಚಿವ ಸಂಪುಟ ಸೇರುವ ಕನಸಿನಲ್ಲಿದ್ದ ಶಾಸಕರಿಗೆ ಬೇಸರವಾಗಿದ್ದು, ಅಸಮಧಾನ ಭುಗಿಲೇಳುವ ಸಾಧ್ಯತೆ ಇದೆ.

ಇನ್ನು ಸಚಿವ ಸಂಪುಟ ವಿಸ್ತರಣೆಯಾಗದೇ ಹೋದಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ಬೆಳವಣಿಗೆಗಳು ನಡೆಯುತ್ತವೆ ಅನ್ನೋದು ಕುತೂಹಲ ಮೂಡಿಸಿದೆ. ಮೂಲದ ಪ್ರಕಾರ ಈಗಾಗಲೇ ಸಂಪುಟ ವಿಸ್ತರಿಸಿದರೆ ಸರ್ಕಾರ ಉರುಳಬಹುದು ಹಾಗಾಗಿ ಲೋಕಸಭಾ ಚುನಾವಣೆವರೆಗೂ ಮುಂದೂಡಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿಗೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ವಾರ ಸಂಪುಟ ವಿಸ್ತರಣೆ ಅನುಮಾನ. ಒಟ್ಟಿನಲ್ಲಿ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ದೇವೆಗೌಡರು ಹಾಗೂ ಕಾಂಗ್ರೆಸ್ ಹೈಕಮಾಂಡ ದಿನಕ್ಕೊಂದು ತಂತ್ರ ಹೂಡುತ್ತಿರೋದಂತು ಸುಳ್ಳಲ್ಲ.