ಭಾಷಣ ಮಾತ್ರ ಮಾಡುತ್ತ- ದೇಶದ ಆರ್ಥಿಕ ವ್ಯವಸ್ಥೆ ಕೆಡಿಸಿದ ಕೀರ್ತಿ ಮೋದಿಯವರದ್ದು- ಕಲ್ಬುರ್ಗಿಯಲ್ಲಿ ಖರ್ಗೆ ಆರೋಪ!

ಸತ್ತರ್ ಸಾಲ್ ಮೇ ಕಾಂಗ್ರೆಸ್ ನೇ ಕ್ಯಾ ಕೀಯಾ? ಅಂತಾ ಪದೇ ಪದೇ ಪ್ರಶ್ನಿಸುವ ಮೋದಿಯವರೇ, ಸತ್ತರ್ ಸಾಲ್ ಪಹೇಲೆ ಕಲಬುರಗಿ ಕೈಸಾ ಥಾ ? ಹೀಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದು, ಲೋಕಸಭೆ ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ.

ad

 ತೈಲ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ವೇಳೆ ಕಲಬುರಗಿ ನಗರದ ಸೂಪರ್ ಮಾರ್ಕೇಟ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹಮ್ ಕಲಬುರಗಿಮೇ ಸೆಂಟ್ರಲ್ ಯುನಿವರ್ಸಿಟಿ, ಇಎಸ್‌ಐ ಮೆಡಿಕಲ್ ಹಬ್, ಏರ್‌ಪೋಟ್೯, ಹೈ ಕ 371(ಜೆ) ಬನಾಯೇ…ಆಪ್ ಕ್ಯಾ ಬನಾಯೇ ಮೋದಿ ಸಾಬ್…ಬತಾವೋನಾ ಅಂತಾ ಹಿಂದಿ ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡರು.

 

ಹಮ್ ದೇಶ್‌ಕಿ ಧರ್‌ತಿ ಪೇ ಖೂನ್ ಬಹಾ ರಹೇ ಥೆ, ತಬ್ ಆಪ್ ಕಹಾಂ ಥೆ ಅಂತಾ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನ ಪ್ರಶ್ನಿಸಿದರು.. ಯುಪಿಎ ಸರ್ಕಾರವಿದ್ದಾಗ ತೈಲ ಬೆಲೆ ಏರಿಕೆಯಾದಗ ನಿವೆಲ್ಲ ಪ್ರತಿಭಟನೆ ನಡೆಸಿದ್ದಿರಿ.. ಕಳೆದ ನಾಲ್ಕು ವರ್ಷದಲ್ಲಿ 13 ಸಲ ತೈಲ ಬೆಲೆ ಏರಿಸಲಾಗಿದ್ದು, 214 ಪರ್ಸೆಂಟ್ ಹೆಚ್ಚಳವಾಗಿದೆ, ಇದಕ್ಕಾಗಿ ನಾವು ದೇಶದ ಜನರ ಪರ ಹೋರಾಟ ಮಾಡುತ್ತಿದ್ದೇವೆಂದರು..

 

ಪೆಟ್ರೋಲ್ ಡಿಸೆಲ್ ಮೇಲೆ ತಡರಿಗೆ ದರ ಏರಿಸಿ 11 ಲಕ್ಷ ಕೋಟಿ ರೂಪಾಯಿ ಹಣ ಪಡೆದಿದ್ದಿರಿ, ಆ ಹಣ ಎಲ್ಲಿ ಹೋಯಿತು ಅಂತಾ ಪ್ರಶ್ನಿಸಿದರು. ಇಷ್ಟೆಲ್ಲ ಆದರು ಸಹ ಅವರು ಮೋದಿ ಒಳ್ಳೆಯವರು ಅಂತಾ ಹೇಳ್ತಾರೆ, ಏನ್ರಿ ಅಂತಹದು ಮೋದಿ ಒಳ್ಳೆಯದು ಮಾಡಿದ್ದು ಅಂತಾ ಕಿಡಿಕಾರಿದರು. ವಿಶ್ವವ್ಯಾಪಿ ಕೇವಲ ಭಾಷಣ ಮಾಡ್ತಾ ದೇಶದ ಆರ್ಥಿಕ ವ್ಯವಸ್ಥೆ ಹದಗೇಡುವಂತೆ ಮಾಡಿರುವ ಕೀರ್ತಿ ಮೋದಿಗೆ ಸಲ್ಲುತ್ತದೆ ಅಂತಾ ಹೇಳಿದರು…