ಬೆಳ್ಳಂಬೆಳಗ್ಗೆ ರೌಡಿಗಳ ಎದೆಯಲ್ಲಿ ನಡುಕ ಮೂಡಿಸಿದ ಸಿಸಿಬಿ – ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ರೌಡಿ ಪರೇಡ್- ಬಾಲ ಬಿಚ್ಚಿದ್ರೆ ಹುಶಾರ್ ಅಂದ್ರು ಡಿಸಿಪಿ ಗಿರೀಶ್​!

ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರ್ತಿದ್ದಂತೆ ರೌಡಿಗಳ , ದಂಧೆಕೋರರ ಎದೆಯಲ್ಲಿ ನಡುಕ ಮೂಡಿಸಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ತಮ್ಮ ಎಂದಿನ ಶೈಲಿಯಲ್ಲಿ ಕಾನೂನು ಉಲ್ಲಂಘಿಸುವವರನ್ನು ಬೇಟೆಯಾಡಲು ಆರಂಭಿಸಿದ್ದಾರೆ. ಇಸ್ಟೀಟ್ ಅಡ್ಡೆಗಳ ಮೇಲೆ ಧಾಳಿ ನಡೆಸಿದ್ದ ಅಲೋಕ್ ಇವತ್ತು ಬೆಳ್ಳಂ ಬೆಳಗ್ಗೆ ರೌಡಿಶೀಟರ್​​ಗಳಿಗೆ ಶಾಕ್​ ನೀಡಿದ್ದು, ಡಿಸಿಪಿ ಗಿರೀಶ್​ ನೇತೃತ್ವದಲ್ಲಿ ರೌಡಿಗಳ ಮೇಲೆ ಧಾಳಿ ನಡೆಸಿದ್ದಾರೆ.

ad

   

ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಹಾಗೂ ಡಿಸಿಪಿ ಗಿರೀಶ್ ನೇತೃತ್ವದ ತಂಡ ಲೋಕೇಶ್ ಆಲಿಯಾಸ್ ಮುಲಾಮ ಮಂಜ. ಕೊಮ್ಮಘಟ್ಟ ಮಂಜ. ಅತೂಷ್.‌ಜೆಸಿಬಿ ನಾರಾಯಣ. ಮೈಕಲ್ ಡಿಸೋಜಾ. ಮಾಹೀಮ್. ಲಕ್ಷ್ಙಣ.‌ಲಕ್ಕಸಂದ್ರ ವಿಜಿ. ರಾಬರಿ ಗಿರಿ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿ ರೌಡಿಚಟುವಟಿಕೆಗೆ ಹೆಸರಾಗಿದ್ದ ಸುಮಾರು 40 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ರು.

ದಾಳಿ ವೇಳೆ ಸುಮಾರು 100 ರಿಂದ 120 ವಿವಿಧ ಜಮೀನಿನ ದಾಖಲೆ ಪತ್ರಗಳು.15 ಚೆಕ್. 14 ಮೊಬೈಲ್. 300 ಗ್ರಾಂ ಚಿನ್ನ.‌1 ಪೋರ್ಡ್ ಕಾರು. 1ಶಿಫ್ಟ್ ಕಾರು. 1 ಫಾರ್ಚೂನರ್.‌ಎರಡು ನಗದು ಎಣಿಕೆ ಯಂತ್ರ. 500 ರೂ ಮುಖಬೆಲೆಯ 2,20.000 ಹಳೇ ನೋಟು ಹಾಗೂ ಒಂದು ನಕಲಿ ಪಿಸ್ತೂಲ್. 7 ಚಾಕು. 2 ತಲ್ವಾರ್. 3 ಮಚ್ಚು. ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ರು.

 

ಇನ್ನು ಇದೇ ವೇಳೆ ಮಾತಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಮು ಲಾಮ್ ಹಾಗೂ ಜೆಸಿಬಿ‌ ನಾರಾಯಣ ಮನೆಯಲ್ಲೂ ಬಹಳಷ್ಟು ದಾಖಲೆ ಸಿಕ್ಕಿವೆ ಅಷ್ಟೆ ಅಲ್ಲ ದೂದ್ ರವಿ ಮನೆಯಲ್ಲಿ ಫಾರ್ಚೂನರ್ ಕಾರು ಸಿಕ್ಕಿದೆ. ದೂದ್ ರವಿ ಕಾರು ಹೆಂಗೆ ಬಂತು ಅಂತ ಪ್ರಶ್ನೆ‌ ಮಾಡಿದ್ರೆ 20 ಹಸುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಖರೀದಿ ಅಂತ ಹೇಳುತ್ತಿದ್ದಾನೆ. ಆ ಎಲ್ಲಾ ದಾಖಲೆಗಳನ್ನು ಪರಿಶೀಲನೆ‌ ಮಾಡುತ್ತಿವೆ. ಹಾಗೇ ಲ್ಯಾಂಡ್ ರ್ಯಾಂಬರ್ಸ್ . ಹಪ್ತಾ ವಸೂಲಿ ಯಾವುದೇ ಪ್ರಕರಣ ಇದ್ರೂ 9480801555 ನಂಬರ್ ಗೆ ಮಾಹಿತಿ ಕೊಡಿ ಎಂದರು ಒಟ್ಟಾರೆ ಇವತ್ತು ಸಿಸಿಬಿ ಪೊಲೀಸರ ದಿಡೀರ್ ದಾಳಿಯಿಂದ ಬೆಂಗಳೂರಿನ ರೌಡಿಗಳು ಶಾಕ್ ಆಗಿದ್ದಂತೂ ಸತ್ಯ. ಇನ್ನು ಉಳಿದ ರೌಡಿಗಳು ಬೆಂಗಳೂರು ಬಿಡೋದಂತೂ ನಿಜ.‌