ಮೀಟರ್ ಬಡ್ಡಿ ಮಾಫಿಯಾಗೆ ಸಿಸಿಬಿ ಶಾಕ್​- ನಗರದ ಹಲವೆಡೆ ದಾಳಿ ನಡೆಸಿದ ಕ್ರೈಂಬ್ರ್ಯಾಂಚ್​​!

 

ad


ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಅನೈತಿಕ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಬ್ಯಾಕ್​ ಟೂ ಬ್ಯಾಕ್​  ಶಾಕ್​ ನೀಡುತ್ತಲೇ ಇದ್ದಾರೆ. ಮೊನ್ನೆ -ಮೊನ್ನೆಯಷ್ಟೇ ರೌಡಿಗಳ ಪರೇಡ್​ ನಡೆಸಿ ಸಖತ್​ ವಾರ್ನ್ ಮಾಡಿದ್ದ ಸಿಸಿಬಿ ಈ ಭಾರಿ ಜನಸಾಮಾನ್ಯರ ರಕ್ತ ಹೀರುತ್ತಿರುವ ಮೀಟರ್ ಬಡ್ಡಿ ದಂಧೆಕೋರರ ಮೇಲೆ ರೇಡ್ ನಡೆಸಿ ಶಾಕ್ ನೀಡಿದೆ.

ನಗರದಲ್ಲಿ ಮೀಟರ್ ಬಡ್ಡಿ ದಂಧೆ ಎಲ್ಲೆ ಮೀರುತ್ತಿರುವ ಬಗ್ಗೆ ಈಗಾಗಲೇ ಹಲವು ಭಾರಿ ಸುದ್ದಿಯಾಗಿತ್ತು. ಹೀಗಾಗಿ ನಗರದ 15 ಕಡೆ ಏಕಕಾಲಕ್ಕೆ ದಾಳಿ ನಡೆಸಿರೋ ಸಿಸಿಬಿ ಅಧಿಕಾರಿಗಳು 69 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರ, ಕಾಮಾಕ್ಷಿ ಪಾಳ್ಯ, ಚಂದ್ರಾಲೇಔಟ್ ಮುಂತಾದ ಪ್ರದೇಶಗಳಲ್ಲಿ ದಾಳಿ ನಡೆದಿದೆ.
ಮೀಟರ್ ಬಡ್ಡಿಕೋರರ ಬಳಿ ಇದ್ದ ಖಾಲಿ, ಚೆಕ್​ಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ 258 ಚೆಕ್,ಆಸ್ತಿ ಪತ್ರಗಳು ಸೇರಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್ ವೇಲು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.