50 ಕೋಟಿ ಸಾಲ ಕೊಡಿಸುವ ಹೆಸರಲ್ಲಿ ವಂಚನೆ- ಜ್ಯೋತಿಷಿಯಿಂದ ಮೋಸಹೋದ ನಿರ್ದೇಶಕ ಎಸ್.ನಾರಾಯಣ!

 ಎಂಥ ಸೆಲಿಬ್ರಿಟಿಗಳಾದ್ರೂ ಹಣದ ವಿಚಾರ ಬಂದಾಗ ಯಾಮಾರೋದು ಸಹಜ. ಅಂತಹುದೇ ಘಟನೆಯೊಂದು ಸ್ಯಾಂಡಲವುಡ್​ನಲ್ಲಿ ನಡೆದಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ ಹೀಗೆ ಮೋಸ ಹೋದ ವ್ಯಕ್ತಿ.
ತಮಿಳುನಾಡಿದ ಮೂಲದ ಮಂದಾರ ಮೂರ್ತಿ ಎಂಬುವವರೇ ಎಸ್.ನಾರಾಯಣರನ್ನು ವಂಚಿಸಿದ ಜ್ಯೋತಿಷಿ. ಇವರು ಎಸ್​.ನಾರಾಯಣಗೆ 40 ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ್ದ. ಇದನ್ನು ನಂಬಿದ ಎಸ್.ನಾರಾಯಣ ಸಾಲ ಪ್ರೊಸೆಶಿಂಗ್ ಫೀಸಾಗಿ 43 ಲಕ್ಷ ರೂಪಾಯಿ ನೀಡಿದ್ದರು ಎನ್ನಲಾಗಿದೆ.

ad

2016 ರಲ್ಲಿ ಎಸ್​.ನಾರಾಯಣ ಚಿತ್ರ ನಿರ್ಮಾಣಕ್ಕಾಗಿ ಸಾಲ ಪಡೆಯಲು ಬ್ಯಾಂಕ್​ಗೆ ಅಲೆದಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪರಿಚಯವಾಗಿದ್ದ ಎನ್ನಲಾಗಿದೆ. ಆತ ಎಸ್.ನಾರಾಯಣ ಅವರನ್ನು ತಮಿಳುನಾಡಿಗೆ ಕರೆದೊಯ್ದು ಮಂದಾರಮೂರ್ತಿಯನ್ನು ಪರಿಚಯಿಸಿದ್ದ. ಆತ ತನಗೆ 50 ಕೋಟಿ ರೂಪಾಯಿ ಡಿಡಿ ನೀಡಿ, ಪ್ರೊಸೆಸಿಂಗ್​ ಫೀಸ್ ಎಂದು 43 ಲಕ್ಷ ಪಡೆದಿದ್ದ ಬಳಿಕ ಅದು ಫೇಕ್​ ಡಿಡಿ ಎಂಬುದು ಅರಿವಾಯಿತು ಎಂಬುದಾಗಿ ಎಸ್.ನಾರಾಯಣ ವಿವರಣೆ ನೀಡಿದ್ದಾರೆ.
ಹೀಗಾಗಿ ಎಸ್.ನಾರಾಯಣ ಯಶ್ವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಧ್ಯ ತಮಿಳುನಾಡಿನ ಮೂಲದ ಮಂದಾರ ಮೂರ್ತಿಯ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಅಲ್ಲದೇ ಮಂದಾರ ಮೂರ್ತಿಗಾಗಿ ಶೋಧ ಮುಂದುವರೆಸಿದ್ದಾರೆ.