ಕೊಟ್ಟ ಮಾತು ಉಳಿಸಿಕೊಂಡ ಸಿಎಂ‌ ಎಚ್ಡಿಕೆ! ಬಡ ಬಾಲಕಿ ಶಸ್ತ್ರಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕುಮಾರಸ್ವಾಮಿ!!

ಮಂಡ್ಯ ಜಿಲ್ಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯ ಶಸ್ತ್ರ ಚಿಕಿತ್ಸೆಗೆ ಸಿಎಂ ಸಹಾಯ ಹಸ್ತ ಚಾಚಿದ್ದಾರೆ. ಶ್ರೀರಂಗಪಟ್ಟಣದ ಹೊಸ ಆನಂದೂರು ಗ್ರಾಮದ ಬಡ ಕುಟುಂಬದ ಬಾಲಕಿಯ ಬಲಗೈ ಶಸ್ತ್ರ ಚಿಕಿತ್ಸೆಗೆ ಸಿಎಂ ಹೆಚ್​ಡಿ ಕುಮಾರಸ್ವಾಮಿ ನೆರವಾಗಿದ್ದಾರೆ.

ad

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಲಕಿ ಚಿಕಿತ್ಸೆಗೆ ನೆರವಾಗುವಂತೆ ಬಾಲಕಿ ಕುಟುಂಬಸ್ಥರು ಸಿಎಂಗೆ ಮನವಿ ಮಾಡಿದ್ರು. ಆದ್ರೆ, ನೀತಿ ಸಂಹಿತೆಯಿದ್ದು ಚುನಾವಣೆ ಮುಗಿದ ಬಳಿಕ ಬಾಲಕಿಗೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ರು. ಎಲೆಕ್ಷನ್​​ ಮುಗಿಯುತ್ತಿದ್ದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಸಿಎಂ ಚಿಕಿತ್ಸೆ ಕೊಡಿಸಿದ್ದಾರೆ.

ಸದ್ಯ ಸಿಎಂ ನೆರವಿನಿಂದ ಬಾಲಕಿ ಶ್ರೇಯಾಂಜಲಿ ಚೇತರಿಸಿಕೊಂಡಿದ್ದಾಳೆ. ಚುನಾವಣೆಯಲ್ಲಿ ಮಗ ನಿಖಿಲ್ ಸೋತರು ಬಡ ಕುಟುಂಬಕ್ಕೆ ಕೊಟ್ಟ ಭರವಸೆಯನ್ನು ಸಿ.ಎಂ ಈಡೇರಿಸಿದ್ದಾರೆ. ಮಗಳ ಚಿಕಿತ್ಸೆಗೆ ನೆರವಾದ ಸಿಎಂ Hdkಗೆ ಇಡೀ ಕುಟುಂಬ ಕೃತಜ್ಞತೆ ಸಲ್ಲಿಸಿದ್ದಾರೆ