ಅಂಬಿ ಕೊಡುಗೆ ಶೂನ್ಯ!. ಅಂಬಿ, ಸುಮಲತಾ ವಿರುದ್ಧ ಹೆಚ್ಡಿಕೆ ವಾಗ್ದಾಳಿ.

“ನಾನು ಮತ್ತು ಅಂಬರೀಶ್ ಪಕ್ಷ ಬೇರೆ ಆದರೂ ಒಟ್ಟಾಗಿದ್ದೆವು. ಆದರೆ ನಮ್ಮಲ್ಲಿ ಬಿರುಕು ಮೂಡಿಸಲು ಕೆಲವರು ಹೊರಟಿದ್ದಾರೆ. ಅಂಬಿ ನಿಧನದ ದಿನ ಸ್ಮರಿಸಿದ ಸಿಎಂ. ಅಂದು ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ಹೋಗೋದು ಬೇಡ ಅಂದ್ರು. ಅಂತಹವರು ಇಂದು ಮಂಡ್ಯ ಜಿಲ್ಲೆಯ ಬಗ್ಗೆ ಮಾತಾಡ್ತಾರೆ “ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ , ಸುಮಲತಾಗೆ ರಾಜಕೀಯ ತಿರುಗೇಟು ನೀಡಿದ್ದಾರೆ.

ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯಲ್ಲಿ ನಡೆದ 5 ಸಾವಿರ ಕೋಟಿ ಯೋಜನೆಗಳಿಗೆ ಶಂಕುಸ್ಥಾಪನೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಅಂಬರೀಷ್ ಸೇರಿದಂತೆ ಕೈ ನಾಯಕರ ವಿರುದ್ಧ ಬ್ಯಾಟಿಂಗ್ ಮಾಡಿದ್ದಾರೆ.

ಸಚಿವರಿಗೆ ಅಂಬರೀಷ್ ಏನೂ ಮಾಡಿಲ್ಲ. ಸಚಿವರಾಗಿ ಅವರು ಮಾಡದ್ದನ್ನ ನಾವು ಮಾಡ್ತಿದ್ದೀವಿ. ಮಂಡ್ಯ ಜಿಲ್ಲಾ ಅಮೃತ ಮಹೋತ್ಸವ ಮಾಡಿದ್ರು. ಕೇವಲ ಮನರಂಜನೆಗೆ ಅದು ಸೀಮಿತ ಆಯ್ತು. ನಾನೂ ಆ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೆ. ನೀವು ರಸಮಂಜರಿ ಸವಿದಿರಿ ಆದರೆ ಯಾವುದೆ ಅಭಿವೃದ್ಧಿ ಕಾರ್ಯಕ್ರಮ ಆಗಲಿಲ್ಲ ಎಂದು ಹೇಳಿದರು.