ರಾಜಗುರು ದ್ವಾರಕಾನಾಥ್ ಭೇಟಿ ಮಾಡಿದ ಎಚ್​ಡಿಕೆ! ಕುತೂಹಲ ಮೂಡಿಸಿದ ಸಿಎಂ ಕುಮಾರಸ್ವಾಮಿ ಭೇಟಿ!!

ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಕುಮಾರಸ್ವಾಮಿ ರಾಜಗುರು ದ್ವಾರಕನಾಥ್ ಗುರೂಜಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.


ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ರಾಜಗುರು ದ್ವಾರಕನಾಥ್ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಅಲ್ಲದೇ ರಾಜಗುರು ದ್ವಾರಕಾನಾಥರು ಶುಕ್ರವಾರದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಸಹ ಸಿಎಂ ಪಾಲ್ಗೊಂಡರು.


ಎಲೆಕ್ಷನ್​ ಬಳಿಕ ಸಿಎಂ ಕುಮಾರಸ್ವಾಮಿ ಎರಡನೇ ಬಾರಿ ರಾಜಗುರು ದ್ವಾರಕಾನಾಥ ಅವರನ್ನು ಭೇಟಿ ಮಾಡಿದ್ದು, ಮಂಡ್ಯದ ರಿಸಲ್ಟ್​ ಬಗ್ಗೆ ಸಿಎಂ ಗುರುಗಳ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿಯವರಿಗೆ ಧೈರ್ಯ ತುಂಬಿದ ದ್ವಾರಕನಾಥ್​ ಅವರು ಮಂಡ್ಯ ರಿಸಲ್ಟ್​ ಬಗ್ಗೆ ಚಿಂತೆ ಬೇಡ ಎಂದಿದ್ದಾರೆ.

ಇದಲ್ಲದೇ ಕುಮಾರಸ್ವಾಮಿಯವರು, ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆಯೂ ಚರ್ಚೆ ನಡೆಸಿದ್ದು, ದ್ವಾರಕನಾಥ ಸಲಹೆಯಂತೆ ನೆನೆಗುದಿಗೆ ಬಿದ್ದಿದ್ದ ಕುಕ್ಕೆ ಚಿನ್ನದ ರಥದ ವಿಚಾರಕ್ಕೆ ಚಾಲನೆ ನೀಡಿದ್ದರ ಬಗ್ಗೆಯೂ ಮಾಹಿತಿ ನೀಡಿದರು ಎನ್ನಲಾಗಿದೆ. ಒಟ್ಟಿನಲ್ಲಿ ಕುಮಾರಸ್ವಾಮಿಯವರು ದಿಢೀರ ರಾಜಗುರು ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.