ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್ ಪತನ- ಸಚಿವ ಎನ್.ಮಹೇಶ್ ರಾಜೀನಾಮೆ

 

 ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಮ್ಮಿಶ್ರ ಸರ್ಕಾರದ ಮೊದಲ ವಿಕೇಟ್​ ಪತನವಾಗಿದ್ದು, ರಾಜ್ಯದ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ಎನ್.ಮಹೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎನ್​.ಮಹೇಶ್, ಸಚಿವನಾಗಿ 4 ತಿಂಗಳು ಕೆಲಸ ಮಾಡಿದ್ದೇನೆ. ಆದರೇ ನೀರಿಕ್ಷಿತ ಪ್ರಮಾಣದಲ್ಲಿ ಪಕ್ಷದ ಕೆಲಸ ಮಾಡಲು ಸಾಧ್ಯವಾಗದೇ ಇರೋದರಿಂದ ನಾನು ನನ್ನಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

 

ಇನ್ನು ಈಗಾಗಲೇ ಸಚಿವ ಎನ್​.ಮಹೇಶ್ ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ಕುಮಾರಸ್ವಾಮಿಯವರಿಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಇದು ಮೊದಲ ಸಾಕ್ಷಿ ಎನ್ನಬಹುದಾಗಿದ್ದು, ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಇದು ಸಮ್ಮಿಶ್ರ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಇನ್ನು ಮೇಲಷ್ಟೇ ನೋಡಬೇಕಿದೆ.
ಇನ್ನು ಲೋಕಸಭೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಈ ರಾಜೀನಾಮೆ ನೀಡಿದ್ದೇನೆ ಎಂದಿರುವ ಎನ್.ಮಹೇಶ್​ ನಾನು ನನ್ನ ಇಲಾಖೆಯಲ್ಲಿ ವಿಫಲನಾಗಿದ್ದೇನೆ ಅನ್ನೋದು ಸರಿಯಲ್ಲ. ಮುಂದೇ ಬಂದವರಿಗೆ ಈ ಇಲಾಖೆ ಏನು ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ. ಒಟ್ಟಿನಲ್ಲಿ ಎನ್.ಮಹೇಶ್ ರಾಜೀನಾಮೆ ಹಲವು ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದ್ದು, ಬಿಜೆಪಿ ನಾಯಕರಿಗೆ ಸರ್ಕಾರದ ವಿರುದ್ಧ ಒಳ್ಳೆಯ ಟೀಕಾಸ್ತ್ರ ದೊರೆತಂತಾಗಿದೆ.