ಕೆಸಿಸಿ ಕಪ್​ಗೆ ವರ್ಣರಂಜಿತ ಚಾಲನೆ-ಸಿನಿಮಾ ತಂಡದ ಕ್ರಿಕೇಟ್​ ಹಬ್ಬಕ್ಕೆ ಸಂಭ್ರಮ!

ದಿಗ್ಗಜ ಕ್ರಿಕೆಟಿಗರು ಮತ್ತು ಸ್ಯಾಂಡಲ್​ವುಡ್ ಸಿನಿಮಾ ತಾರೆಯರು ಒಟ್ಟಾಗಿ ಆಡಲಿರುವ ಕೆಸಿಸಿ ಕಪ್​​ಗೆ ಇಂದು ವರ್ಣ ರಂಜಿತ ಚಾಲನೆ ಸಿಕ್ಕಿದೆ. 2ನೇ ಆವೃತ್ತಿಯ 2 ದಿನಗಳ ಕನ್ನಡ ಚಲನಚಿತ್ರ ಕಪ್ ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.

ad


ಇಂದು ಮತ್ತು ನಾಳೆ ನಡೆಯಲಿರೋ ಟೂರ್ನಿಯಲ್ಲಿ ಸ್ಟಾರ್ ನಟರು ವಿವಿಧ ತಂಡಗಳ ಸಾರಥ್ಯ ವಹಿಸಿದ್ದರೆ ಮಾಜಿ ಸ್ಟಾರ್ ಕ್ರಿಕೆಟಿಗರು ತಂಡಕ್ಕೆ ಬಲ ತುಂಬಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಮತ್ತು ರಾಜ್ಯದ ಹಾಲಿ ವೃತ್ತಿಪರ ಆಟಗಾರರು ಕೂಡ ಟೂರ್ನಿಯಲ್ಲಿ ಆಡಲಿದ್ದಾರೆ. ಕಿಚ್ಚ ಸುದೀಪ್ ಸಾರಥ್ಯದ ಕದಂಬ ಲಯನ್ಸ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ತಂಡಗಳು ಸೆಣಸಲಿವೆ.

ಇನ್ನು ವಿಜಯನಗರ ಪೇಟ್ರಿಯಾಟ್ಸ್, ಗಂಗಾ ವಾರಿಯರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ಹೊಯ್ಸಳ ಈಗಲ್ಸ್ ತಂಡಗಳು ಕಣದಲ್ಲಿವೆ.
ಸದಾ ಸಿನಿಮಾ, ಶೂಟಿಂಗ್, ಪ್ರಚಾರ ಅಂತಲೇ ಬ್ಯುಸಿಯಾಗಿರುವ ಸ್ಯಾಂಡಲ್​ವುಡ್ ಮಂದಿ ಇನ್ನೆರಡು ದಿನ ಸಂಪೂರ್ಣ ರಿಲ್ಯಾಕ್ಸ್ ಮೂಡ್​ನಲ್ಲೇ ಮುಳುಗಲಿದ್ದಾರೆ. ಸಿಲಿಕಾನ್ ಸಿಟಿಯ ಸಿನಿಮಾ ಮತ್ತು ಕ್ರಿಕೆಟ್ ಪ್ರೇಮಿಗಳು ಸಹ ಭಾಗಿಯಾಗಿದ್ದಾರೆ.