ಹಾಸ್ಯನಟನಿಗೆ ವಂಚನೆ- ಇಬ್ಬರ ಬಂಧನ!

 ಹೆಣ್ಣಿನ ವೇಷ ಧರಿಸಿ ತುಳು ಸಿನಿ ಕಲಾವಿದನಿಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆದಿತ್ಯ ಮತ್ತು ಅರುಣ್​​​ ಬಂಧಿತರು. ಮಂಗಳೂರಿನ ತುಳು ಹಾಸ್ಯ ನಟನನ್ನು ಆರಾಧ್ಯ ಎಂಬ ಹೆಂಗಸಿನ ಹೆಸರಿನಲ್ಲಿ ಫೇಸ್ ಬುಕ್ ಮೂಲಕ ಆದಿತ್ಯ ಪರಿಚಯ ಮಾಡಿಕೊಂಡಿದ್ದ. ಸಲುಗೆ ಬೆಳೆಸಿಕೊಂಡಿದ್ದ. ಇದೇ ಸಲುಗೆಯಲ್ಲಿ ತನ್ನ ಬೆತ್ತಲೆ ಫೋಟೋವನ್ನು ಹಾಸ್ಯ ನಟ ಕಳಿಸಿಕೊಟ್ಟಿದ್ದ.

 

 

ಈ ಫೋಟೋ ಬಳಸಿ 65 ಸಾವಿರ ವಸೂಲಿ ಮಾಡಿದ್ದ ತಂಡ ಪದೇ ಪದೇ ಹಣಕ್ಕಾಗಿ ಪೀಡಿಸಿದಾಗ ಉರ್ವಾ ಠಾಣೆಗೆ ನಟ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡು ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಯಶವಂತಪುರ ನಿವಾಸಿ ಆದಿತ್ಯ ಮತ್ತು ಕನಕಪುರದ ಅರುಣ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯ ಎಂಬಾತ ಹೆಣ್ಣಿನ ವೇಷ ಧರಿಸಿ ಮೋಸ ಮಾಡಿದ್ದು ಗೊತ್ತಾಗಿದೆ.