ಶೋಭಾ ಕರಂದ್ಲಾಜೆ ಮಾಟ ಮಾಡಿಸ್ತಾರಂತೆ!! ಹಾಲಪ್ಪ ಥರ್ಡ್ ಕ್ಲಾಸ್ ಎಂಎಲ್ ಎ ಅಂದ್ರು ಬೇಳೂರು!! ಕೃಷ್ಣ.. ಕೃಷ್ಣಾ..

ಶಿವಮೊಗ್ಗದಲ್ಲಿ ಇಂದು ಕಾಂಗ್ರೆಸ್ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣರವರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಾನು ಬಚ್ಚಾ ಅಲ್ಲ, ಶೋಭಾ ಮೇಡಂ ಬಚ್ಚಿ, ಅವರದ್ದು ಒಂದೇ ದಂಧೆ ಮಾಟಮಂತ್ರ ಮಾಡಿಸಿ ಜನರನ್ನು ಮುಳುಗಿಸುವುದು ಎಂಬ ವಿವಾದಾತ್ಮಕ ಹೇಳಿಕೆನ್ನು ನೀಡಿದ್ದಾರೆ.

ad

ಹೌದು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೇಳೂರು ಗೋಪಾಲ ಕೃಷ್ಣ ಕೆಲವು ದಿನಗಳ ಹಿಂದೆ ಶೋಭಾ ಕರಂದ್ಲಾಜೆಯವರನ್ನು ನನ್ನ ಬಗೆಗೆ ಕೇಳಿದಾಗ ಅವರು ನಾನು ಬಚ್ಚಾ ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಅದು ಬಹುಶಃ ಅದು ಈಗಾಗಲೇ ನಿಮಗೆಲ್ಲಾ ತಿಳಿದಿದೆ.

ಕೆಲವು ದಿನಗಳ ಹಿಂದೆ ಈ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರೆ ನನ್ನ ಕುರಿತು ಮಾತನಾಡಿದ್ದಾರೆ ಎಂದರೆ ಗೋಪಾಲ ಕೃಷ್ಣ ಬೇಳೂರು ಬಚ್ಚಾ ಅಲ್ಲ ಶೋಭಾ ಕರಂದ್ಲಾಜೆ ಮೇಡಂರವರೆ ಬಚ್ಚಿ, ಹಾಗಾಗಿ ಆ ಬಚ್ಚಿಯವರನ್ನು ಯಾವುದೇ ಕಾರಣಕ್ಕೂ ಬಿಜೆಪಿಯವರು ಯಾರೂ ರಾಜ್ಯಾಧ್ಯಕ್ಷರಾಗಿ ಮಾಡುವುದಿಲ್ಲ. ಏನು ಸಹ ಮಾಡುವುದಿಲ್ಲ, ಅವರದ್ದು ಒಂದೇ ದಂಧೆ ಮಾಟಮಂತ್ರ ಮಾಡಿಸುವುದು ಯಾರು ಯಾರು ನಾಯಕರಾಗುತ್ತಾರೆಯೋ ಅವರನ್ನು ಮುಳುಗಿಸುವುದು ಅದನ್ನು ಬಿಟ್ಟು ಅವರು ಏನು ಮಾಡುವುದಿಲ್ಲ, ತಿಳಿದಿದರಲಿ ಗೋಪಾಲ ಕೃಷ್ಣ ಬೇಳೂರು ಸಹ ಲೀಡರ್ ಆಗಿದ್ದಾರೆ. ಅದು ಇಡೀ ದೇಶದಲ್ಲಿಯೇ ಹೆಸರಾಗುವಂತೆ ಲೀಡರ್ ಆಗಿದ್ದಾರೆ ಎಂದು ಮಾಧ್ಯಮಗಳ ಮುಂದೆ ಶೋಭಾ ಕರಂದ್ಲಾಜೆಯವರು ವಿರುದ್ದ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು. ಈ ವೇಳೆ ಹಾಲಪ್ಪ ಒಬ್ಬ ಥರ್ಡ್ ಕ್ಲಾಸ್ ಎಂಎಲ್ ಎ ಎಂದು ಸಹ ಹೇಳಿಕೆ ನೀಡಿದರು.