ಜಮೀನು ವಿವಾದದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಪೇದೆಯಿಂದ ಪೆಟ್ರೋಲ್ ಹಿಡಿದು ಪ್ರತಿಭಟನೆ!

 

ಗಾಂಧಿ ಜಯಂತಿ ದಿನವೇ ನ್ಯಾಯಕ್ಕಾಗಿ ಎಎಸ್ಐ ಪೊಲೀಸರೊಬ್ಬರು ಕೈಯಲ್ಲಿ ಪೆಟ್ರೋಲ್ ಹಿಡಿದು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಡಿಎಆರ್ ವಿಭಾಗದ ಎಎಸ್​ಐ ವೆಂಕಟರೆಡ್ಡಿ ಎಂಬುವರೇ ಹೀಗೆ ಕೈಯಲ್ಲಿ ಪೆಟ್ರೋಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಪೇದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಮೀನು ವಿವಾದದಲ್ಲಿ ಸಹಾಯಕ ಕಮೀಷನರ್ ಶುಭಾ ಕಲ್ಯಾಣ್ ಯಾವುದೇ ಕ್ರಮಕೈಗೊಳ್ಳಲಿಲ್ಲವೆಂದು ಪೇದೆ ವೆಂಕಟರೆಡ್ಡಿ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವಿದ್ರು ಎಸಿ ಶುಭಾಕಲ್ಯಾಣ್ ಅವರು ತನಿಖೆ ಮಾಡದೆ ನಿರ್ಲಕ್ಷ್ಯ ಮಾಡತ್ತ ತನ್ನ ವಿರುದ್ಧ ಅಕ್ರಮ ಎಸೆಗಿರುವವರ ಪರ ನಿಂತಿದ್ದಾರೆ ಎಂದು ವೆಂಕಟರೆಡ್ಡಿ ಆರೋಪಿಸಿದ್ದಾರೆ.

ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮದ ಕಾಂಗ್ರೆಸ್ ಮುಖಂಡ ರಂಘನಾಥರೆಡ್ಡಿ ಎನ್ನುವರು ಪೇದೆ ವೆಂಕಟರೆಡ್ಡಿ ಜಮೀನನ್ನು ಅಕ್ರಮವಾಗಿ ಕ್ರಯ ಮಾಡಿಕೊಂಡು ಪೊಲೀಸ್ ಇಲಾಖೆ‌ ಕುಮ್ಮಕ್ಕಿನಿಂದ ಜಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರದ ಸರ್ವೆ 22/9 ಬಿ ನಾಲ್ಕು ಎಕರೆಯ ಕೃಷಿ ಭೂಮಿ ತಮಗೆ ನೀಡುವಂತೆ ಒತ್ತಾಯ ಮಾಡಿ ತಮ್ಮ ಕುಟುಂಬದ ವಿರುದ್ಧ ಕಿರುಕುಳ ನೀಡುತ್ತಿದ್ದಾರೆ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಆರೋಪಿಸಿ ನ್ಯಾಯ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.
ಇನ್ನು ಸ್ಥಳಕ್ಕೆ ಗಲ್​ಪೇಟೆ ಪೊಲೀಸರು ಬೇಟಿ ನೀಡಿ ಪ್ರತಿಭಟನಾ ನಿರತ ಎಎಸ್​ಐ ಬಳಿ ಇದ್ದ ಪೆಟ್ರೋಲ್​ ಕಸಿದುಕೊಂಡು ಪ್ರತಿಭನೆ ಕೈ ಬಿಡುವಂತೆ ಮನವಿ ಮಾಡಿದ್ರು. ಆದ್ರೆ ಯಾವುದಕ್ಕೂ ಬಗ್ಗದ ಎಎಸ್​ಐ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.