2019 ಐಸಿಸಿ ವರ್ಲ್ಡ್​​ಕಪ್​​ಗೆ ಕ್ಷಣಗಣನೆ! ಇಂಗ್ಲೆಂಡ್​​-ವೇಲ್ಸ್​ ಆತಿಥ್ಯದಲ್ಲಿ ಭರ್ಜರಿ ಕ್ರಿಕೇಟ್​ ಹಬ್ಬ! ಗೆಲುವಿನ ಕನಸಿನಲ್ಲಿ ಕಣಕ್ಕಿಳಿದ ಕೊಹ್ಲಿಪಡೆ!!

2019 ಐಸಿಸಿ ಏಕದಿನ ವಿಶ್ವಕಪ್ ಗೆ ಕ್ಷಣಗಣನೆ ಶುರುವಾಗಿದೆ. 2019 ರ ಐಸಿಸಿ ಏಕದಿನ ವಿಶ್ವಕಪ್‌‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಈ  ಬಾರಿ ಇಂಗ್ಲೆಂಡ್ ಹಾಗು ವೇಲ್ಸ್ ಆಥಿತ್ಯ‌ ವಹಿಸಲಿದೆ.ಮೇ 30 ರಿಂದ ಜೂನ್ 14 ರವರೆಗೆ ಪಂದ್ಯಗಳು ನಡೆಯಲಿದ್ದು, ಟೀಂ ಇಂಡಿಯಾ  ಜೂನ್ 5 ರಂದು ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ರೌಂಡ್ ರಾಬಿನ್ ಮಾದರಿಯಲ್ಲಿ ಸಾಗಲಿರುವ ಟೂರ್ನಿಯಲ್ಲಿ ಎಲ್ಲ ತಂಡಗಳು ಲೀಗ್ ಹಂತದಲ್ಲಿ ತಲಾ ಒಂಬತ್ತು ಪಂದ್ಯಗಳನ್ನು ಆಡಲಿದೆ.
ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

ಭಾಗವಹಿಸುವ ತಂಡಗಳು:
ಇಂಗ್ಲೆಂಡ್‌
ದಕ್ಷಿಣ ಆಫ್ರಿಕಾ
ಭಾರತ
ಆಸ್ಪ್ರೇಲಿಯಾ
ನ್ಯೂಜಿಲೆಂಡ್‌
ಪಾಕಿಸ್ತಾನ
ಬಾಂಗ್ಲಾದೇಶ
ಶ್ರೀಲಂಕಾ
ಅಫಘಾನಿಸ್ತಾನ
ವೆಸ್ಟ್‌ ಇಂಡೀಸ್‌

ವಿಶ್ವಕಪ್ ನಲ್ಲಿ ಭಾರತ ತಂಡದ ವೇಳಾಪಟ್ಟಿ

(ದಿನಾಂಕ, ಪಂದ್ಯ, ಸ್ಥಳ, ಸಮಯ)


ಜೂ.5, ದಕ್ಷಿಣ ಆಫ್ರಿಕಾ – ಭಾರತ, ದಿ ರೋಸ್‌ ಬೌಲ್‌, 3.00 ಮಧ್ಯಾಹ್ನ

ಜೂ.9, ಭಾರತ -ಆಸ್ಪ್ರೇಲಿಯಾ, ಕೆನ್ನಿಂಗ್ಟನ್‌ ಓವಲ್‌, 3.00 ಮಧ್ಯಾಹ್ನ

ಜೂ.13, ಭಾರತ-ನ್ಯೂಜಿಲೆಂಡ್‌, ಟ್ರೆಂಟ್‌ ಬ್ರಿಡ್ಜ್‌, 3.00 ಮಧ್ಯಾಹ್ನ

ಜೂ.16, ಭಾರತ- ಪಾಕಿಸ್ತಾನ, ಎಮಿರೇಟ್ಸ್‌ ಓಲ್ಡ್‌ ಟ್ರಾಫೋರ್ಡ್‌, 3.00 ಮಧ್ಯಾಹ್ನ

ಜೂ.22, ಭಾರತ- ಅಫಘಾನಿಸ್ತಾನ, ದಿ ರೋಸ್‌ ಬೌಲ್‌, 3.00 ಮಧ್ಯಾಹ್ನ
ಜೂ
ಜೂ.27, ವೆಸ್ಟ್‌ ಇಂಡೀಸ್‌ – ಭಾರತ, ಎಮಿರೇಟ್ಸ್‌ ಓಲ್ಡ್‌ ಟ್ರಾಫೋರ್ಡ್‌, 3.00 ಮಧ್ಯಾಹ್ನ

ಜೂ.30, ಇಂಗ್ಲೆಂಡ್‌ – ಭಾರತ, ಎಡ್ಜ್‌ಬಾಸ್ಟನ್‌, 3.00 ಮಧ್ಯಾಹ್ನ

ಜು.2, ಬಾಂಗ್ಲಾದೇಶ -ಭಾರತ, ಎಡ್ಜ್‌ಬಾಸ್ಟನ್‌, 3.00 ಮಧ್ಯಾಹ್ನ

ಜು.6, ಶ್ರೀಲಂಕಾ-ಭಾರತ, ಹೇಡಿಂಗ್ಲೆ, 3.00 ಮಧ್ಯಾಹ್ನ.

ಕೊಹ್ಲಿ ನಾಯಕತ್ವದ ಭಾರತ ತಂಡದಲ್ಲಿ ಅನುಭವಿಗಳ ಕೊರತೆ ಎದ್ದು ಕಾಣುತ್ತಿದೆ.ಯುವರಾಜ್ ಸಿಂಗ್,ಸುರೇಶ್ ರೈನ ರಂತ ಆಟಗಾರರು ಇಲ್ಲದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.ಆದರೂ ಉತ್ತಮ ಫಾರ್ಮ್ ನಲ್ಲಿರುವ ದೋನಿ,ಕನ್ನಡಿಗ ಕೆ ಎಲ್ ರಾಹುಲ್ ,ರೋಹಿತ್ ಶರ್ಮ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ರೆ ಇತ್ತ ಐಪಿಎಲ್ ನಲ್ಲಿ ಮಿಂಚಿದ್ದ ಆಲ್ ರೌಂಡರ್ಸ್ ಹಾರ್ಧಿಕ್ ಪಾಂಡ್ಯ,ಜಡೆಜಾ ಮಿಂಚಿದ್ರೆ ಅಭಿಮಾನಿಗಳಿಗೆ ರನ್ ಗಳ ರಸದೌತಣ ಪಕ್ಕಾ.


ಇತ್ತ ಭಾರತತ ಬೌಲಿಂಗ್ ಸ್ಟ್ರೆಂತ್ ನೋಡೊದಾದ್ರೆ ವೇಗಿಗಳಾಗಿ ಬುಮ್ರಾ,ಶಮಿ,ಭುವನೇಶ್ವರ್ ಕುಮಾರ್ ಇದ್ರೆ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್,ಚಹಲ್ ಕೈ ಚಳಕ ತೋರಲಿದ್ದಾರೆ.

ಇಡಿ ರಾಷ್ಟ್ರವೆ ಕ್ರಿಕೆಟ್ ಹಬ್ಬಕ್ಕೆ ಎದುರು ನೋಡುತ್ತಿದ್ದು.ಭಾರತ 2011 ರಲ್ಲಿ ವರ್ಲ್ಡ್‌ ಕಪ್ ಮುಡಿಗೇರಿಸಿಕೊಂಡ ಖುಷಿಯನ್ನು ಮತ್ತೆ ಭಾರತೀಯರಿಗೆ ಉಣಬಡಿಸುತ್ತಾರ ಕಾದು ನೋಡ್ಬೇಕು….ಅಲ್ ದ ಬೆಸ್ಟ್ ಟೀಂ ಇಂಡಿಯಾ