ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಜೋಡಿ….ನಮ್ಮ ನಡುವೆ ಅನೈತಿಕ ಸಂಬಂಧ ಇಲ್ಲಾ ಅಂತಾ ತಬ್ಬಿಕೊಂಡು ಆತ್ಮಹತ್ಯೆ..

 

ನವ ವಿವಾಹಿತೆ, ಯುವಕನೊಂದಿಗೆ ಸೇರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುರುವಿನ ಹಳ್ಳಿಯಲ್ಲಿ ನಡೆದಿದೆ. 22 ವರ್ಷದ ರವಿ ಇಂಗಳಹಳ್ಳಿ ಹಾಗೂ 22 ವರ್ಷದ ನವ ವಿವಾಹಿತೆ ಮೇಘ ಪಾಟೀಲ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

 

 

ಒಬ್ಬರಿಗೊಬ್ಬರು ವೇಲ್ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡ ಮೇಘಾ ಪತಿ ಹಾಗೂ ಆತನ ಕುಟುಂಬಸ್ಥರು ರವಿ ಇಂಗಳಹಳ್ಳಿ ಜೊತೆ ಅನೈತಿಕ ಸಂಬಂಧ ಇದೆ ಅಂತಾ ಕಿರುಕುಳ ನೀಡ್ತಾಯಿದ್ರಂತೆ.ಹಾಗಾಗಿ ಮನನೊಂದು ನಮ್ಮ ಇಬ್ಬರ ನಡುವೆ ಅನೈತಿಕ ಸಂಬಂಧ ಇಲ್ಲಾ ಅಂತಾ ಡೆತ್‌ ನೋಟ್ ಬರೆದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ….