ಮಗಳ ಮದುವೆಗೆ ಕ್ರೇಜಿ ಸ್ಟಾರ್​ ರವಿಚಂದ್ರನ್ ಭರ್ಜರಿ ಗಿಫ್ಟ್..!

ಮದುವೆ ಅನ್ನೋದು ಪ್ರತಿಯೊಬ್ಬ ಹೆಣ್ಣಿನ ಜೀವನದ ಪ್ರಮುಖ ಘಟ್ಟ. ತನಗೆ ಗೊತ್ತು ಪರಿಚಯವಿಲ್ಲದ ಮನೆಗೆ ಹೆಣ್ಣು ಸೊಸೆಯಾಗಿ ಹೋಗ್ತಾಳೆ ಅಂದ್ರೆ ಪ್ರತಿ ತಂದೆ-ತಾಯಿಗಳ ಮನಸು ಪ್ರತಿ ಕ್ಷಣ ಮಿಡಿಯುತ್ತಿರುತ್ತದೆ. ಅದೇ ರೀತಿ ಕ್ರೇಜಿಸ್ಟಾರ್ ತಮ್ಮ ಮುದ್ದಿನ ಮಗಳ ಮದುವೆ ನಿಶ್ಚಯಿಸಿದ್ದು, ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿದ್ದು ಗೊತ್ತಿರೋ ವಿಷಯ. ಮದುವೆಗೆ ಸಿದ್ಧವಾಗಿರೋ ಮಗಳಿಗೆ ಕ್ರೇಜಿಸ್ಟಾರ್​ ವಿಶೇಷ ಗಿಫ್ಟ್​ವೊಂದನ್ನು ನೀಡೋಕೆ ಸಿದ್ಧವಾಗಿದ್ದಾರೆ.

ad

ಮೇ 29ರಂದು ರವಿಚಂದ್ರನ್ ಪುತ್ರಿ, ಗೀತಾಂಜಲಿ ಬ್ಯುಸಿನೆಸ್​ಮೆನ್​ ಅಜಯ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಶುಭದಿನದಂದು ರವಿಚಂದ್ರನ್ ಅವರು ತಾವೇ ಬರೆದು ಹಾಗೂ ಕಂಪೋಸ್ ಮಾಡಿರೋ ಹಾಡೊಂದನ್ನು ಪುತ್ರಿಗೆ ಗಿಫ್ಟ್​​​ ಆಗಿ ನೀಡಲಿದ್ದಾರೆ. ಇನ್ನು ಈ ಹಾಡನ್ನು ಶ್ರೀವತ್ಸವ್ ಹಾಡಿದ್ದಾರೆ.

ಕ್ರೇಜಿ ಸ್ಟಾರ್ ತಾವು ಅಭಿನಯಿಸಿರೋ ಸಾಕಷ್ಟು ಚಿತ್ರಗಳಿಗೆ ಸ್ವತಃ ತಾವೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇದೀಗ ಮಗಳ ಮದುವೆಗೆ ಒಂದು ಹಾಡು ರೆಡಿ ಮಾಡಿದ್ದಾರೆ. ಬೆಳೆದ ಮೇಲೆ ನೀನು, ನಾನು ಮಗವಾದೆ, ಯಾಕೋ ಏನೋ ತಿಳಿಯದೆ ಚಡಪಡಿಸುತ್ತಿದೆ ಮನಸು ನೋವು-ನಲಿವು, ಜೊತೆಗೆ ಸಂಭ್ರಮವಾಗಿದೆ. ಓ ನನ್ನ ಮಗಳೇ ಅನ್ನೋ ಅದ್ಭುತ ಲೈನ್​ಗಳನ್ನ ರವಿಮಾಮ ಬರೆದಿದ್ದಾರೆ. ಪ್ರತಿ ಪದದಲ್ಲೂ ಕ್ರೇಜಿ ಸ್ಟಾರ್​ ಮಗಳ ಮೇಲಿರೋ ಪ್ರೀತಿ, ಮಮಕಾರ, ಬಾಂಧವ್ಯ ಗೊತ್ತಾಗುತ್ತದೆ.


ಸದ್ಯ ರವಿಚಂದ್ರನ್​ ಮಗಳ ಮದುವೆಗೆ ಭರ್ಜರಿ ತಯಾರಿ ಮಾಡಿಕೊಳ್ಳುವಲ್ಲಿ ಬ್ಯೂಸಿಯಾಗಿದ್ದಾರೆ. ಮಗಳ ಮದುವೆ ಇರೋದ್ರಿಂದ ರಾಜೇಂದ್ರ ಪೊನ್ನಪ್ಪ ಚಿತ್ರದ ಶೂಟಿಂಗ್​ನ್ನ ಪೋಸ್ಟ್​ ಪೋನ್ ಮಾಡಿ ಮದುವೆ ಕಾರ್ಯದಲ್ಲಿ ಎಂಗೇಜ್ ಆಗಿದ್ದಾರೆ.