ತುಮಕೂರಿನ ಬಳಿ ಸಿ ಟಿ ರವಿ ಕಾರು ಅಪಘಾತ- ಇಬ್ಬರ ಸಾವು. ಈಗ ಸಿ ಟಿ ರವಿ ಹೇಗಿದ್ದಾರೆ?

C T Ravi

ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರ ದುರ್ಮರಣ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ರಸ್ತೆಯಲ್ಲಿ ನಿಂತಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತರಾದ ದುರ್ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪದ ರ್ಕೇನಹಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘಟನೆ ಸಂಭವಿಸಿದೆ. ಶೃಂಗೇರಿಗೆ ಪ್ರವಾಸಕ್ಕೆಂದು ತೆರಳಿದ್ದ ಸುಮಾರು 13 ಯುವಕರು, ವಾಪಾಸಾಗುವ ವೇಳೆ ಊರ್ಕೇನಹಳ್ಳಿ ಬಳಿ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಸಿಟಿ ರವಿ ಅವರಿದ್ದ ಕಾರು ಮೂವರು ಯುವಕರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಇಬ್ಬರು ಮೃತರಾದರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸೊರೇನಹಳ್ಳಿಯ ಶಶಿಕುಮಾರ್​, ಸುನಿಲ್​ ಗೌಡ ಎಂಬ ಯುವಕರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸಿ.ಟಿ.ರವಿ ಅವ್ರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿ ಅವ್ರನ್ನು ದಾಖಲಿಸಲಾಗಿದೆ.

ಸಿ.ಟಿ.ರವಿ ಯ ಕಾರು ಚಾಲಕ ಕುಡಿದು ಕಾರು ಓಡಿಸುತ್ತಿದ್ದ ಎಂದು ಗಾಯಾಳು ಪುನೀತ್ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿ.ಟಿ.ರವಿ ಬೆಂಬಲಿಗರನ್ನ ಕರೆಸಿಕೊಂಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಎಂಎಲ್​​ಎ ಬೆಂಬಲಿಗರು ಬೆದರಿಕೆ ಹಾಕಿದ್ರು. ಗಾಯಾಳುಗಳನ್ನು ಎಂಎಲ್​ಎ ಸೌಜನ್ಯಕ್ಕೂ ಮಾತನಾಡಿಸಲಿಲ್ಲ ಎಂದು ಪುನೀತ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಸಿ.ಟಿ.ರವಿ ವಿರುದ್ಧ ಅತಿವೇಗದ ಡ್ರೈವಿಂಗ್, ನಿರ್ಲಕ್ಷ್ಯದ​​ ಕೇಸ್​ ನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಘಟನೆಗೆ ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು , ಸದ್ಯಕ್ಕೆ ವಿಕ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿತಿಳಿಸಿದ್ದಾರೆ.