ದಲೈಲಾಮಾ ಹತ್ಯೆಗೆ ನಡೆದಿತ್ತು ಸಂಚು- ಎನ್​​ಐಎ ಬಿಚ್ಚಿಟ್ಟ ಸ್ಪೋಟಕ ಸಂಗತಿ!

 

ad


 ಬೌದ್ಧಧರ್ಮ ಗುರು ದಲೈಲಾಮ ರನ್ನು ಕೊಲ್ಲಲು ಕರ್ನಾಟಕದಲ್ಲಿ ಸಂಚು ರೂಪಿಸಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿ ಇದೀಗ ಹೊರ ಬಿದ್ದಿದೆ. ತಿಂಗಳ ಹಿಂದೆ ರಾಮನಗರದಲ್ಲಿ ಬಂಧಿತನಾದ ಜಮಾತ್ ಉಲ್ಲಾ ಮುಜಾಹಿದ್ದಿನ್ ಬಾಂಗ್ಲಾದೇಶ್ ಉಗ್ರಸಂಘಟನೆಯ ನಾಯಕ ಜಹಿದ್ದೀಲ್ ಇಸ್ಲಾಂ ಅಲಿಯಾಸ್ ಮುನೀರ್ ಈ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಬುದ್ ಗಯಾ ಸ್ಪೋಟಕ್ಕೆ ಸಂಬಂಧಿಸಿದಂತೆ ಎನ್ ಐ ಎ ಚಾರ್ಜ್ ಶೀಟ್ ಸಲ್ಲಿಸಿದ್ದು ಇದರಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಿದೆ.

 

ಇದೇ ವರ್ಷ ಜನವರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮ ಗುರು ದಲೈ ಲಾಮ ಹಾಗೂ ಬಿಹಾರ ರಾಜ್ಯಪಾಲರು ಭಾಗವಹಿಸಬೇಕಿತ್ತು ಇದಕ್ಕೂ ಮೊದಲು ಬಾಂಬ್ ಸ್ಪೋಟವಾಗಿತ್ತು. ಮೂರು ಜೀವಂತ ಐ ಇ ಡಿ ಹಾಗೂ ಎರಡು ಹ್ಯಾಂಡ್ ಗ್ರೆನೆಡ್ ಬಳಿಸಲಾಗಿತ್ತು. ಸ್ಪೋಟಕ್ಕೆ ಅತ್ಯಾಧುನಿಕ ಸ್ಪೋಟಕಗಳಾದ ಐ ಇ ಡಿ ಹಾಗೂ ಹ್ಯಾಂಡ್ ಗ್ರೆನೇಡ್ ಬಳಸಲಾಗಿತ್ತು. ಇದರಲ್ಲಿ ಒಂದು ಐ ಇ ಡಿ ಮಾತ್ರ ಸ್ಪೋಟವಾಗಿದ್ದು ಎರಡು ಜೀವಂತ ಐಇಡಿ ಹಾಗೂ ಗ್ರೆನೇಡ್ ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಸ್ಪೋಟದ ಮಾಸ್ಟರ್ ಮೈಂಡ್ ಮುನೀರ್…ಈ ಸ್ಪೋಟದ ಮಾಸ್ಟರ್ ಮೈಂಡ್ ಮುನೀರ್ ಆಗಿದ್ದು ಬಾಂಗ್ಲದೇಶದ ಮುನೀರ್ ಅಲ್ಲಿನ ಜೈಲಿನಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಮುನೀರ್ ಮೇಲೆ ೯೫ ವರ್ಷ ಶಿಕ್ಷೆ ಬಾಂಗ್ಲಾದಲ್ಲಿ ವಿಧಿಸಲಾಗಿತ್ತು. ಹೀಗೆ ಭಾರತದಲ್ಲಿದ್ದ ಮುನೀರ್ ನನ್ನು ಎನ್ ಐ ಎ ರಾಮನಗರದಲ್ಲಿ ಹಾಗೂ ಆತನ ಸಹಚರ ಅದಿಲ್ ಶೇಖ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಇದೇ ಅದಿಲ್‌ಶೇಖ್ ಹಾಗೂ ಎಸ್ಕೇಪ್ ಆಗಿರುವ ಅರೀಪ್ ಹುಸೇನ್ ಎಂಬುವವರು ಸ್ಪೋಟಕಗಳನ್ನು ಇಟ್ಟಿದ್ದರು ಎಂದು ಎನ್ ಐ ಎ ಹೇಳಿದೆ