ಆಸ್ಪತ್ರೆ ಸೇರಿದ ದರ್ಶನ- ಜೈಲು ಸೇರಿದ ದುನಿಯಾ ವಿಜಿ- ಹೀರೋಗಳಿಗೆ ಸಂಕಷ್ಟ,ನಂಬಿದ ನಿರ್ಮಾಪಕರಿಗೆ ಪ್ರಾಣಸಂಕಟ!

ಒಂದ್ಕಡೆ ಸ್ಯಾಂಡಲ್​​ವುಡ್​ ಹೀರೋಗಳಿಗೆ ಸಂಕಷ್ಟವಾದ್ರೆ ಮತ್ತೊಂದೆಡೆ ಉದ್ಯಮಕ್ಕೆ ತಳಮಳ ಶುರುವಾಗಿದೆ. ಚಾಲೆಂಜಿಂಗ್​​ ಸ್ಟಾರ್​​​ ದರ್ಶನ್​​ ಕಾರು ಅಪಘಾತದಲ್ಲಿ ಬಲಗೈ ಮುರಿದುಕೊಂಡಿದ್ದಾರೆ.ಮತ್ತೊಂದೆಡೆ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್​​ ಜೈಲು ಸೇರಿದ್ದಾರೆ. ಈ ಇಬ್ಬರೂ ನಾಯಕರು ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಅದ್ರ ಎಫೆಕ್ಟ್​ ಚಿತ್ರರಂಗದ ಮೇಲೂ ಉಂಟಾಗಿದೆ.

adದರ್ಶನ್​​ಗೆ ವೈದ್ಯರು ಕನಿಷ್ಟ ಒಂದು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ​​ಹೀಗಾದಿ ದರ್ಶನ ನಟನೆಯ ಒಡೆಯ ಸಿನಿಮಾದ ಶೂಟಿಂಗ್​​​ ಸ್ಥಗಿತಗೊಂಡಿದೆ. ಸೋಮವಾರದಿಂದ ಒಡೆಯ ಚಿತ್ರೀಕರಣದಲ್ಲಿ ದರ್ಶನ್​​​​ ಪಾಲ್ಗೊಳ್ಳಬೇಕಿತ್ತು. ಇನ್ನು ಯಜಮಾನ ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದ್ದು ಅದೂ ಮುಂದಕ್ಕೆ ಹೋಗಲಿದೆ. ಇದಿಷ್ಟೇ ಅಲ್ಲದೇ ವೀರ ಮದಕರಿನಾಯಕ ಸೇರಿದಂತೆ ದರ್ಶನ್​​ನ ಅಪ್​ಕಮಿಂಗ್​ ಮೂವಿಗಳ ಚಿತ್ರೀಕರಣದ ಮೇಲೂ ಪರಿಣಾಮ ಉಂಟಾಗಲಿದೆ.

ಇತ್ತ ದುನಿಯಾ ವಿಜಯ್​ ತಮ್ಮದೇ ನಿರ್ಮಾಣದ ಕುಸ್ತಿ ಸಿನಿಮಾಗೆ ತಯಾರಿ ಮಾಡಿಕೊಳ್ತಿದ್ರು. ಮುಂದಿನ ತಿಂಗಳೇ ಶೂಟಿಂಗ್​ ಆರಂಭವಾಗಬೇಕಿತ್ತು. ಆದ್ರೆ ಹಲ್ಲೆ ಪ್ರಕರಣದಲ್ಲಿ ವಿಜಯ್​​ ಜೈಲು ಸೇರಿರೋದು ಈ ಸಿನಿಮಾಗೂ ಸಂಕಷ್ಟ ತಂದಿದೆ. ಐದರಿಂದ ಆರು ಸಿನಿಮಾಗಳ ಶೂಟಿಂಗ್​​ ನಿಲ್ಲೋದ್ರಿಂದ ಉದ್ಯಮದ ಮೇಲೂ ಇದು ಎಫೆಕ್ಟ್​ ಮಾಡಲಿದೆ.