ಮೈಸೂರಿನಲ್ಲಿ ದಸರಾ ಸಂಭ್ರಮ-ಖಾಸಗಿ ದರ್ಬಾರ್ ಗೆ ಸಿಂಹಾಸನ ಜೋಡಣೆಗೆ ಚಾಲನೆ!

 

ad


ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆಯಲ್ಲೂ ದಸರಾ ಸಿದ್ಧತೆಗಳು ಭರದಿಂದ ಸಾಗಿವೆ. ಕರ್ನಾಟಕದ ದಸರಾದಲ್ಲಿಯೇ ಮೈಸೂರು ಅರಮನೆಯ ಖಾಸಗಿ ದರ್ಬಾರ ಹೆಚ್ಚಿನ ಮಹತ್ವ ಹಾಗೂ ಪ್ರಮುಖ ಆಕರ್ಷಣೆ. ಈ ಭಾರಿ ಮೈಸೂರಿನ ಯುವರಾಜ ಯದುವೀರ್​ ಪುತ್ರಕೂಡ ದಸರಾದಲ್ಲಿ ಪಾಲ್ಗೊಳ್ಳೋದರಿಂದ ಆಕರ್ಷಣೆ ಇನ್ನಷ್ಟು ಹೆಚ್ಚಿದೆ. ಈ ಮಧ್ಯೆ ಇಂದು ದರ್ಬಾರ ಹಾಲ್​ನಲ್ಲಿ ಸಿಂಹಾಸನ ಜೋಡಣೆಗೆ ಚಾಲನೆ ನೀಡಲಾಗಿದೆ.

ಅರಮನೆಯಲ್ಲಿ ಖಾಸಗಿ ದರ್ಬಾರ್​​​ಗೆ ಕೈಂಕರ್ಯಗಳು ಆರಂಭವಾಗಿವೆ. ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಗೆಜ್ಜಗಳ್ಳಿ ಗ್ರಾಮದವರಿಂದ ಸಿಂಹಾಸನದ ಬಿಡಿಭಾಗಗಳ ಜೋಡಣೆ ಆರಂಭವಾಗಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಜೋಡಣೆ ಕಾರ್ಯ ನಡೆಯುತ್ತಿದೆ.

 

ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯುತ್ತಿರೋದ್ರಿಂದ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರತಿಭಾರಿ ದಸರಾ ದರ್ಬಾರ್​​ ಪ್ರಮುಖ ಆಕರ್ಷಣೆಯಾಗಿದ್ದು, ನಾಡಿನ ಸಮಸ್ತ ಜನರೂ ಮೈಸೂರು ದಸರಾದ ಜಂಬೂಸವಾರಿ ಜೊತೆ ಖಾಸಗಿ ದರ್ಬಾರ ಕಣ್ತುಂಬಿಕೊಳ್ಳಲು ಖಾತರರಾಗಿದ್ದಾರೆ.