ಉಪ ಚುನಾವಣೆಗೆ ಮುಹೂರ್ತ ಫಿಕ್ಸ್​​- ಅಭ್ಯರ್ಥಿಗಳ ಆಯ್ಕೆಗೆ ಕೊನೆ ಹಂತದ ಸರ್ಕಸ್​​- ಕಣದಲ್ಲಿದ್ದಾರೆ ಘಟಾನುಘಟಿಗಳು!

 

ರಾಜ್ಯದಲ್ಲಿ ಉಪಚುನಾವಣೆಗೆ ಮುಹೂರ್ತ ಫಿಕ್ಸ್​ ಆಗುತ್ತಿದ್ದಂತೆ ಪಕ್ಷಗಳಲ್ಲಿ ಟಿಕೇಟ್​ಗಾಗಿ ಪೈಪೋಟಿ ಆರಂಭವಾಗಿದೆ. ರಾಜ್ಯದಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶಿವಮೊಗ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಆಯ್ಕೆ ಹಾಗೂ ಜೆಡಿಎಸ್​ ಅಭ್ಯರ್ಥಿ ಆಯ್ಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗಿದೆ. ಆದರೇ ಜೆಡಿಎಸ್​ನಲ್ಲಿ ಮಾತ್ರ ಗೀತಾ ಶಿವರಾಜಕುಮಾರ್ ಮತ್ತು ಮಧುಬಂಗಾರಪ್ಪ ಹೆಸರು ಕೇಳಿಬಂದಿದ್ದು, ಅಕ್ಕ ತಮ್ಮನ ನಡುವೆ ಯಾರಿಗೆ ಟಿಕೇಟ್​ ದೊರೆಯುತ್ತೆ ಅನ್ನೋದು ಸಧ್ಯದ ಕುತೂಹಲ.

ಇನ್ನು ಮಂಡ್ಯ ರಾಜ್ಯದ ಗಮನವನ್ನು ಸೆಳೆದಿದ್ದು, ಜೆಡಿಎಸ್​ನಿಂದ ದೇವೆಗೌಡರ ಮೂರನೇ ತಲೆಮಾರಿನ ನಿಖಿಲ ಕುಮಾರಸ್ವಾಮಿ ಕಣಕ್ಕಿಳಿತಾರೇ ಅನ್ನೋ ಮಾತು ಹೆಚ್ಚಾಗಿ ಕೇಳಿಬಂದಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್​ ವಂಚಿತ ಲಕ್ಷ್ಮೀ ಅಶ್ವಿನ್ ಗೌಡ್ ಹೆಸರು ಕೂಡ ಅಷ್ಟೇ ಪ್ರಭಲವಾಗಿ ಕೇಳಿಬಂದಿದೆ. ಇನ್ನು ಬಳ್ಳಾರಿಯಲ್ಲಿ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಹಾಗೂ ಸಂಡೂರಿನ ರಾಘವೇಂದ್ರ ನಡುವೆ ಪೈಪೋಟಿ ಹೆಚ್ಚಿದೆ.

 


ಇನ್ನು ಸಿಎಂ ಸ್ವಕ್ಷೇತ್ರವಾಗಿದ್ದ ರಾಮನಗರ ಕೂಡ ಉಪಚುನಾವಣೆಯ ಪ್ರಮುಖ ಆಕರ್ಷಣೆಯಾಗಿದ್ದು, ರಾಮನಗರದಿಂದ ಗೌಡ್ರ ಸೊಸೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎನ್ನಲಾಗಿದ್ದರೂ ಇನ್ನು ಖಚಿತವಾಗಿಲ್ಲ. ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಅಥವಾ ರುದ್ರೇಶ್ ಹೆಸರು ಕೂಡ ಕೇಳಿಬಂದಿದೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಸೋಮವಾರದ ವೇಳೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ.