ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ ವಿರುದ್ಧ ಡಿಸಿಎಂ ಪರಂ ಗರಂ- ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ಪರಂ ಪ್ರಶ್ನೆ!

ಕೊಡಗಿಗೆ ಭೇಟಿ ನೀಡಿದ್ದ ವೇಳೆ ಪರಿಶೀಲನಾ ಸಭೆಯಲ್ಲಿ ಸಚಿವ ಸಾ.ರಾ.ಮಹೇಶ್​ ಮೇಲೆ ಗರಂ ಆಗಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ವರ್ತನೆ ರಾಜ್ಯದ ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಿರ್ಮಲಾ ಸೀತಾರಾಮನ್​ ವರ್ತನೆಗೆ ಖಂಡಿಸಿದ ಡಿಸಿಎಂ ಪರಮೇಶ್ವರ್​​​ ನಿರ್ಮಲಾ ಸೀತಾರಾಮನ್ ನಮ್ಮಿಂದಲೇ ರಾಜ್ಯಸಭೆಗೆ ಹೋದವರು. ಅವರೇ ಮುಂಚಿತವಾಗಿ ಬಂದು ಕೊಡಗಿನಲ್ಲಿ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಈ ವರ್ತನೆ ಸರಿಯಲ್ಲ ಎಂದು ಟೀಕಿಸಿದ್ದಾರೆ.

ಅಲ್ಲದೇ ರಾಜ್ಯದಲ್ಲಿರುವ ಬಿಜೆಪಿಯ 18 ಸಂಸದರು ಏನ್​ ಮಾಡ್ತಿದ್ದಾರೆ ಎಂದು ಪರಂ ಪ್ರಶ್ನೆ ಮಾಡಿದ್ದಾರೆ.ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಕೇಂದ್ರ ಸಚಿವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪರಿಹಾರವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಪ್ರಧಾನಿ ಸಚಿವಾಲಯ ತೋರಿದ ವಿಳಂಭ ಧೋರಣೆಯನ್ನು ನಾನು ಖಂಡಿಸುತ್ತೇನೆ. ರಕ್ಷಣಾ ಸಚಿವರನ್ನು ಕಳಿಸುವ ಬದಲು ನಷ್ಟವನ್ನು ಅಂದಾಜು ಮಾಡಲು ಮೋದಿ ತಂಡವನ್ನು ಕಳಿಸಿದ್ದರೆ ನಾನು ಮೆಚ್ಚುತ್ತಿದ್ದೆ ಎಂದಿದ್ದಾರೆ.

ಇನ್ನು ರಕ್ಷಣಾ ಸಚಿವರು ಹಾನಿ ಅಂದಾಜಿಸೋ ಬದಲು ರಾಜ್ಯ ಮಂತ್ರಿಯ ಮೇಲೆ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ. ಕರ್ನಾಟಕದ ಬಗ್ಗೆ ಬಿಜೆಪಿಗೆ ಎಷ್ಟು ಕಾಳಜಿ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಸಿದ್ದು ಟೀಕಿಸಿದ್ದಾರೆ. ಇನ್ನು ಕುಮಾರಸ್ವಾಮಿ ಕೂಡ ಕೇಂದ್ರ ಸರ್ಕಾರ 2 ಕೋಟಿ ಪರಿಹಾರ ನೀಡಿ ಕೋರಿದ್ದು ಪತ್ರ ಬರೆದಿದ್ದಾರೆ.