ಹಫ್ತಾಕ್ಕಾಗಿ ನಡೆದು ಹೋಯಿತು ಮಾರಣಾಂತಿಕ ಹಲ್ಲೆ

ನಗರದಲ್ಲಿ ತಿಂಗಳ ಹಫ್ತಾ ಕೊಟ್ಟಿಲ್ಲ ಅಂತ ಲೇಡಿಸ್ ಪಿಜಿ ಮಾಲೀಕರ ಮೇಲೆ ದೊಣ್ಣೆ ಯಿಂದ ಪುಡಿರೌಡಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಏಪ್ರಿಲ್​​ ಎರಡರಂದು ಬಂಡೇಪಾಳ್ಯದ ಮಂಗಮ್ಮನಪಾಳ್ಯ ಗ್ರೀನ್ ಹಿಲ್ಸ್ ಲೇಡಿ ಪಿಜಿ ಮಾಲೀಕ ಭಾಸ್ಕರ್ ರೆಡ್ಡಿ ಮೇಲೆ ಪುಡಿ ರೌಡು ಬಾಬು ನ ಸಹಚರರು ಗಂಭೀರ ವಾಗಿ ಹಲ್ಲೆ ನಡೆಸಿದ್ದಾರೆ.

ಭಾಸ್ಕರ್ ರೆಡ್ಡಿ ತಮ್ಮ ಅನಿಲ್ ಹಾಗೂ ಇತರ ಮೇಲೆ ದೊಣ್ಣೆಯಿಂದ ತ್ರೀವವಾಗಿ ಹಲ್ಲೆ ಮಾಡಿದ್ದು ಅನಿಲ್ ಸಾವು ಬದುಕಿನ‌ ನಡುವೆ ಆಸ್ಪತ್ರೆ ಹೋರಾಟ ನಡೆಸುತ್ತಿದ್ದಾನೆ. ಇನ್ನು ಭಾಸ್ಕರ್ ರೆಡ್ಡಿ ತಲೆಗೆ ತೀವ್ರ ಪೆಟ್ಟಗಿದ್ದ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯ ಡಿರ್ಸಾಜ್ ಆಗಿದ್ದು ಘಟನೆ ಬಳಿಕ ಭಾಸ್ಕರ್ ರೆಡ್ಡಿ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಬು ಸಹಚರ ಸಾಗರ್ ನ್ನನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬಾಬು ಆತನ ಪಟಲಾಂ ಗೆ ಹುಡುಕಾಟ ಮುಂದುವರೆದಿದೆ‌.